ತೃಪ್ತಿ ದೇಸಾಯಿ ಶಿರಡಿ ಪ್ರವೇಶಕ್ಕೆ ಡಿಸೆಂಬರ್ 11ರವರೆಗೆ ನಿರ್ಬಂಧ

ಭಕ್ತರಿಗೆ ಸಾಂಪ್ರದಾಯಿಕ ಉಡುಪು ಧರಿಸುವಂತೆ ಕೋರಿ ದೇವಾಲಯದ ಅಧಿಕಾರಿಗಳು ಹಾಕಿದ ಬೋರ್ಡ್‌ಗಳನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಡಿಸೆಂಬರ್ 11 ರವರೆಗೆ ಮಹಾರಾಷ್ಟ್ರದ ಪವಿತ್ರ ಪಟ್ಟಣ ಶಿರಡಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ತೃಪ್ತಿ ದೇಸಾಯಿ
ತೃಪ್ತಿ ದೇಸಾಯಿ

ಶಿರಡಿ: ಭಕ್ತರಿಗೆ ಸಾಂಪ್ರದಾಯಿಕ ಉಡುಪು ಧರಿಸುವಂತೆ ಕೋರಿ ದೇವಾಲಯದ ಅಧಿಕಾರಿಗಳು ಹಾಕಿದ ಬೋರ್ಡ್‌ಗಳನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಡಿಸೆಂಬರ್ 11 ರವರೆಗೆ ಮಹಾರಾಷ್ಟ್ರದ ಪವಿತ್ರ ಪಟ್ಟಣ ಶಿರಡಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಸ್ಥಿತಿಯನ್ನು ಉಲ್ಲೇಖಿಸಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಶಿರಡಿ)) ಗೋವಿಂದ್ ಶಿಂಧೆ ದೇಸಾಯಿ ಅವರಿಗೆ ನೋಟಿಸ್ ನೀಡಿದ್ದು, ಡಿಸೆಂಬರ್ 8 ಮಧ್ಯರಾತ್ರಿಯಿಂದ ಡಿಸೆಂಬರ್ 11 ಮಧ್ಯರಾತ್ರಿಯವರೆಗೆ.ಅಹ್ಮದ್‌ನಗರ ಜಿಲ್ಲೆಯಲ್ಲಿರುವ ಶಿರಡಿಗೆ ಪ್ರವೇಶಿಸದಂತೆ ಹೇಳಲಾಗಿದೆ.

ಭಕ್ತರಿಗೆ ಸಾಂಪ್ರದಾಯುಕ ರೀತಿಯಲ್ಲಿ ಉಡುಗೆ ತೊಟ್ಟು ಬರುವಂತೆ ಮನವಿ ಮಾಡಿರುವ ಬಗ್ಗೆ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್‌ಗೆ ಎಚ್ಚರಿಕೆ ನೀಡಿರುವ ತೃಪ್ತಿ ದೇಸಾಯಿ ವಾದಾತ್ಮಕ ಸಂದೇಶವನ್ನು ಹೊತ್ತ ಬೋರ್ಡ್‌ಗಳನ್ನು ತೆಗೆದುಹಾಕದಿದ್ದರೆ ಡಿಸೆಂಬರ್ 10 ರಂದು ತಾನು ಹಾಗೂ ಇತರ ಕಾರ್ಯಕರ್ತರು ಶಿರಡಿಗೆ ಬಂದು ಅದನ್ನು ತೆರವು ಮಾಡುವುದಾಗಿ ಹೇಳಿದ್ದರು. 

"ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ, ದೇಸಾಯಿ ಅವರಿಗೆ ಮಂಗಳವಾರ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಡಿಸೆಂಬರ್ 11 ರವರೆಗೆ ಶಿರಡಿ ಪುರಸಭೆಯ ವ್ಯಾಪ್ತಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ" ಎಂದು ಶಿಂಧೆ ಹೇಳಿದರು.

"ಆಕ್ಷೇಪಾರ್ಹ"ಉಡುಪು ಧರಿಸಿಕೆಲವರು ದೇಗುಲಕ್ಕೆ ಬರುತ್ತಾರೆ ಎಂಬ ದೂರುಗಳ ಹಿನ್ನೆಲೆ ಟ್ರಸ್ಟ್ ದೇವಾಲಯದ ಆವರಣದ ಹೊರಗೆ ಬೋರ್ಡ್‌ಗಳನ್ನು ಹಾಕಿದ್ದು ಭಕ್ತರನ್ನು "ಸುಸಂಸ್ಕೃತ" ರೀತಿಯಲ್ಲಿ ಅಥವಾ "ಭಾರತೀಯ ಸಂಸ್ಕೃತಿಯ" ಪ್ರಕಾರ ಉಡುಪು ಧರಿಸಿ ಬನ್ನಿ ಎಂದು ಮನವಿ ಮಾಡಿತು. ಆದಾಗ್ಯೂ, ಟ್ರಸ್ಟ್‌ನ ಹಿರಿಯ ಅಧಿಕಾರಿಯೊಬ್ಬರು ತಾವು ಯಾವುದೇ ಡ್ರೆಸ್ ಕೋಡ್ ಅನ್ನು ಭಕ್ತರಿಗೆ ವಿಧಿಸಿಲ್ಲ ಅಲ್ಲದೆ ಹಾಕಿರುವ ಸಂದೇಶವು ಕೇವಲ ಮನವಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com