'ಇನ್ವೆಸ್ಟ್ ಇಂಡಿಯಾ'ಗೆ ಯುಎನ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಪ್ರಶಸ್ತಿ: ಪ್ರಧಾನಿ ಮೋದಿ ಅಭಿನಂದನೆ

 ದೇಶವನ್ನು ವಿಶ್ವದ ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡುವತ್ತ ಸರ್ಕಾರ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ದೇಶವನ್ನು ವಿಶ್ವದ ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡುವತ್ತ ಸರ್ಕಾರ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವಸಂಸ್ಸ್ಥೆಯ ಟ್ರೇಡ್ ಅಂಡ್ ಡೆವಲಪ್ಮೆಂಟ್ ಏಜೆನ್ಸಿಯಾದ ಯುಎನ್ ಸಿಟಿಎಡಿ ಯ 2020 ರ ಯುನೈಟೆಡ್ ನೇಷನ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಪ್ರಶಸ್ತಿ ಯನ್ನು ಗೆದ್ದಿದ್ದಕ್ಕಾಗಿ ಅವರು ಇನ್ವೆಸ್ಟ್ ಇಂಡಿಯಾ ಸಂಸ್ಥೆಯನ್ನು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ, ಸರ್ಕಾರವು ಹೂಡಿಕೆ ವ್ಯವಹಾರವನ್ನು ಸುಲಭಗೊಳಿಸುವತ್ತ ಗಮನ ಹರಿಸುತ್ತಿದೆ.  ಈ ಪ್ರಶಸ್ತಿಯು ಭಾರತವನ್ನು ವಿಶ್ವದ ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡುವ ಮತ್ತು ವ್ಯಾಪಾರದ ಹಾದಿಯನ್ನು ಮತ್ತಷ್ಟು ಸರಳೀಕರಿಸುವ, ಸುಧಾರಿಸುವತ್ತ ನಮ್ಮ ಸರ್ಕಾರ ಹರಿಸಿರುವ ಗಮನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಇನ್ವೆಸ್ಟ್ ಇಂಡಿಯಾ ಭಾರತದ ರಾಷ್ಟ್ರೀಯ ಹೂಡಿಕೆ ಉತ್ತೇಜನ ಮತ್ತು ಸೌಲಭ್ಯ ಸಂಸ್ಥೆ. ಇದು ಭಾರತದ ಹೂಡಿಕೆದಾರರಿಗೆ ಉಲ್ಲೇಖದ ಮೊದಲ ಹಂತವಾಗಿ ಕಾರ್ಯನಿರ್ವಹಿಸುತ್ತದೆ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ 2009 ರಲ್ಲಿ ಲಾಭರಹಿತ ಉದ್ಯಮವನ್ನು ಸ್ಥಾಪಿಸಲಾಯಿತು.

ಜಿನೀವಾದ ಯುಎನ್ ಸಿಟಿಎಡಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಇನ್ವೆಸ್ಟ್ ಇಂಡಿಯಾಕ್ಕೆ ಈ ಪ್ರಶಸ್ತಿಯನ್ನು ನೀಡಲಾಯಿತು. ಇದು ವಿಶ್ವದ ಅತ್ಯುತ್ತಮ-ಅಭ್ಯಾಸ ಹೂಡಿಕೆ ಪ್ರಚಾರ ಏಜೆನ್ಸಿಗಳ ಸಾಧನೆಗಳನ್ನು ಆಚರಿಸುತ್ತದೆ. ಬಿಸಿನೆಸ್ ಇಮ್ಯುನಿಟಿ ಪ್ಲಾಟ್ ಫಾರ್ಮ್, ಎಕ್ಸ್ ಕ್ಲೂಸಿವ್ ಇನ್ವೆಸ್ಟ್ ಮೆಂಟ್ ಫೋರಂ ವೆಬ್ ನಾರ್ ಸರಣಿ,  ಫೋಕಸ್ ಕೋವಿಡ್ 19 ಪ್ರತಿಕ್ರಿಯೆ ತಂಡಗಳಾದ ವ್ಯಾಪಾರ ಪುನರ್ನಿರ್ಮಾಣ, ಮಧ್ಯಸ್ಥಗಾರರ ಔಟ್ ರೀಚ್ ಮತ್ತು ಸರಬರಾಜು ಸೇರಿದಂತೆ ಸಾಂಕ್ರಾಮಿಕ ರೋಗಗಳಿಗೆ ಪ್ರತಿಕ್ರಿಯೆಯಾಗಿ ರಚಿಸಲಾದ ಉತ್ತಮ ಅಭ್ಯಾಸಗಳನ್ನು ಯುಎನ್ ಸಿಟಿಎಡಿ ಎತ್ತಿ ತೋರಿಸಿದೆ.

ಈ ಪ್ರಶಸ್ತಿಯು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ನಲ್ಲಿ ತಿಳಿಸಿದ್ದು, ಪ್ರಶಸ್ತಿಯು ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದಂತಹ ದೂರದೃಷ್ಟಿಗೆ ಸಾಕ್ಷಿಯಾಗಿದ್ದು, ಭಾರತವನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com