ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!

ಕೃಷಿಗೆ ಸಂಬಂಧಿಸಿದ 3 ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಪ್ರಾಂತ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಐಆರ್ ಸಿಟಿಸಿ ಡಿ.8-12 ವರೆಗೆ ತನ್ನ ಗ್ರಾಹಕರಿಗೆ ಬರೊಬ್ಬರಿ 2 ಕೋಟಿ ಮೇಲ್ ಕಳಿಸಿದೆ. 
ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!
ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!
Updated on

ನವದೆಹಲಿ: ಕೃಷಿಗೆ ಸಂಬಂಧಿಸಿದ 3 ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಪ್ರಾಂತ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಐಆರ್ ಸಿಟಿಸಿ ಡಿ.8-12 ವರೆಗೆ ತನ್ನ ಗ್ರಾಹಕರಿಗೆ ಬರೊಬ್ಬರಿ 2 ಕೋಟಿ ಮೇಲ್ ಕಳಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಸಿಖ್ ಸಮುದಾಯಕ್ಕೆ ಬೆಂಬಲವಾಗಿ ಏನೆಲ್ಲಾ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಇ-ಮೇಲ್ ನಲ್ಲಿ ತಿಳಿಸುವ ಪ್ರಯತ್ನ ಮಾಡಿದೆ.

ಸಿಖ್ ಸಮುದಾಯದೆಡೆಗೆ ಪ್ರಧಾನಿ ನರೇಂದ್ರ ಮೋದಿ ಹಾಗು ಅವರ ಸರ್ಕಾರದ ವಿಶೇಷ ನಂಟು ಎಂಬ ಶೀರ್ಷಿಕೆಯಡಿ 47 ಪುಟಗಳ ಬುಕ್ ಲೆಟ್ ನ್ನು ಇ-ಮೇಲ್ ಗಳ ಮೂಲಕ ಸಾರ್ವಜನಿಕ ಹಿತಾಸಕ್ತಿಗಾಗಿ ಕಾಯ್ದೆಗಳ ಸಂಬಂಧ ನೈಜಾಂಶವನ್ನು ಅರಿಯುವಂತೆ ಮಾಡುವುದಕ್ಕೆ ಕಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಬುಕ್ ಲೆಟ್ ಗಳನ್ನು ಹಿಂದಿ, ಇಂಗ್ಲೀಷ್, ಪಂಜಾಬಿ ಭಾಷೆಗಳಲ್ಲಿ ತಯಾರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com