ಸರ್ಕಾರಿ ಸಂಸ್ಕೃತ ಶಾಲೆ, ಮದರಸಾಗಳನ್ನು ಮುಚ್ಚಲು ಅಸ್ಸಾಂ ಸಚಿವ ಸಂಪುಟ ಅಸ್ತು

ಸರ್ಕಾರ ನಡೆಸುವ ಎಲ್ಲಾ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ಪ್ರಸ್ತಾಪಕ್ಕೆ ಅಸ್ಸಾಂ ಸಚಿವ ಸಂಪುಟ ಭಾನುವಾರ ಅನುಮೋದನೆ ನೀಡಿದ್ದು,
ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್
ಅಸ್ಸಾಂ ಸಿಎಂ ಸರ್ಬಾನಂದ ಸೋನೊವಾಲ್

ಗುವಾಹಟಿ: ಸರ್ಕಾರ ನಡೆಸುವ ಎಲ್ಲಾ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವ ಪ್ರಸ್ತಾಪಕ್ಕೆ ಅಸ್ಸಾಂ ಸಚಿವ ಸಂಪುಟ ಭಾನುವಾರ ಅನುಮೋದನೆ ನೀಡಿದ್ದು, ಈ ಕುರಿತು ಮಸೂದೆಯನ್ನು ರಾಜ್ಯ ವಿಧಾನಸಭೆಯ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಚಂದ್ರ ಮೋಹನ್ ಪಟೋವರಿ ಅವರು ಹೇಳಿದ್ದಾರೆ.

"ಮದರಸಾ ಮತ್ತು ಸಂಸ್ಕೃತ ಶಾಲೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ರದ್ದುಪಡಿಸಲಾಗುವುದು. ಈ ಸಂಬಂಧ ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು" ಎಂದು ಅಸ್ಸಾಂ ಸರ್ಕಾರದ ವಕ್ತಾರರೂ ಆಗಿರುವ ಪಟೋವರಿ ಅವರು ತಿಳಿಸಿದ್ದಾರೆ.

ಅಸ್ಸಾಂ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿಸೆಂಬರ್ 28 ರಿಂದ ಪ್ರಾರಂಭವಾಗಲಿದೆ.

ಅಸ್ಸಾಂನಾದ್ಯಂತ 610 ಸರ್ಕಾರಿ ಮದರಸಾಗಳಿವೆ ಮತ್ತು ಸರ್ಕಾರವು ಈ ಸಂಸ್ಥೆಗಳಿಗೆ ವಾರ್ಷಿಕ 260 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಹಿಂದೆ ಹೇಳಿದ್ದರು. ಅಲ್ಲದೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲ್ಲ. ಹಾಗಾಗಿ ಸರ್ಕಾರಿ ಅನುದಾನಿತ ಎಲ್ಲ ಮದರಸಾಗಳನ್ನು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗುವುದು ಎಂದಿದ್ದರು. ಆದರೆ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ನೆರವಿನಿಂದ ನಡೆಸಲಾಗುತ್ತಿರುವ ಮದರಸಾಗಳ ಚಟುವಟಿಕೆಗಳಿಗೆ ಸರ್ಕಾರ ಅಡ್ಡಿಯಾಗಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com