
ಗುವಾಹಟಿ: ಅಸ್ಸಾಂನ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ(ಬಿಟಿಸಿ) 40 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ತೀರ್ಪು ಯಾವ ಪಕ್ಷಗಳಿಗೂ ಸಿಕ್ಕಿಲ್ಲ.
ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್(ಬಿಪಿಎಫ್) 17 ಸ್ಥಾನಗಳನ್ನು, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್(ಯುಪಿಪಿಎಲ್) 12 ಸ್ಥಾನಗಳನ್ನು, ಕಾಂಗ್ರೆಸ್ 1 ಮತ್ತು ಗಾನ ಸುರಕ್ಷ ಪಾರ್ಟಿ ಒಂದು ಸ್ಥಾನಗಳನ್ನು ಗೆದ್ದುಕೊಂಡಿದೆ.
ಬಿಜೆಪಿ ಮತ್ತು ಯುಪಿಪಿಎಲ್ ಇದುವರೆಗೆ ಅಧಿಕೃತವಾಗಿ ಮೈತ್ರಿ ಘೋಷಿಸಿಲ್ಲವಾದರೂ ಅತಂತ್ರ ಕೌನ್ಸಿಲ್ ನಿರ್ಮಾಣವಾದರೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದ್ದವು.
ನಿನ್ನೆ ಯುಪಿಪಿಎಲ್ ಮುಖ್ಯಸ್ಥ ಹಾಗೂ ಮಾಜಿ ವಿದ್ಯಾರ್ಥಿ ನಾಯಕ ಪ್ರಮೋದ್ ಬೊಡೊ ಹಾಗೂ ಕೆಲವು ನೂತನ ಚುನಾಯಿತ ಸದಸ್ಯರು ರಾಜ್ಯದ ಸಚಿವ ಹಿಮಂತ ಬಿಸ್ವ ಶರ್ಮ ಅವರನ್ನು ಗುವಾಹಟಿಯಲ್ಲಿ ಭೇಟಿ ಮಾಡಿದ್ದರು. ಅಸ್ಸಾಂನ ಬಿಜೆಪಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ದಿಲೀಪ್ ಸೈಕಿಯಾ, ಬಿಜೆಪಿ ಮತ್ತು ಯುಪಿಪಿಎಲ್ ಒಟ್ಟಾಗಿ ಕೌನ್ಸಿಲ್ ರಚಿಸಲಿದೆ ಎಂದಿದ್ದಾರೆ.
Advertisement