ಶೂದ್ರರನನ್ನು ಶೂದ್ರರೆಂದಾಗ ಬೇಸರ ಪಡುತ್ತಾರೆ, ಏಕೆಂದರೇ...?: ಪ್ರಜ್ಞಾ ಠಾಕೂರ್

ಬ್ರಾಹ್ಮಣರನ್ನು ಬ್ರಾಹ್ಮಣರೆಂದಾಗ ಬೇಸರಪಡದೇ ಸುಮ್ಮನಿರುತ್ತಾರೆ, ಕ್ಷತ್ರಿಯರನ್ನು ಕ್ಷತ್ರಿಯರೆಂದಾಗ ಬೇಸರ ಪಡುವುದಿಲ್ಲ, ಆದರೆ ಶೂದ್ರರನ್ನು ಶೂದ್ರರೆಂದಾಗ ಅವರಿಗೆ ಬೇಸರವಾಗುತ್ತದೆ, ಏಕೆಂದರೇ ಅವರಿಗೆ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಸಂಸದ ಪ್ರಜ್ಞಾ ಠಾಗೂರ್ ಹೇಳಿದ್ದಾರೆ.
ಪ್ರಜ್ಞಾ ಠಾಕೂರ್
ಪ್ರಜ್ಞಾ ಠಾಕೂರ್
Updated on

ಭೂಪಾಲ್: ಬ್ರಾಹ್ಮಣರನ್ನು ಬ್ರಾಹ್ಮಣರೆಂದಾಗ ಬೇಸರಪಡದೇ ಸುಮ್ಮನಿರುತ್ತಾರೆ, ಕ್ಷತ್ರಿಯರನ್ನು ಕ್ಷತ್ರಿಯರೆಂದಾಗ ಬೇಸರ ಪಡುವುದಿಲ್ಲ, ಆದರೆ ಶೂದ್ರರನ್ನು ಶೂದ್ರರೆಂದಾಗ ಅವರಿಗೆ ಬೇಸರವಾಗುತ್ತದೆ ಏಕೆಂದರೇ ಅವರಿಗೆ ಅರ್ಥವಾಗುವುದಿಲ್ಲ ಎಂದು ಬಿಜೆಪಿ ಸಂಸದ ಪ್ರಜ್ಞಾ ಠಾಗೂರ್ ಹೇಳಿದ್ದಾರೆ.

ಮಧ್ಯ ಪ್ರದೇಶದ ಸೆಹೋರ್ ನಲ್ಲಿ ಮಾತನಾಡಿದ ಅವರು, ನಮ್ಮ ಧರ್ಮ ಶಾಸ್ತ್ರದಲ್ಲಿ ಸಮಾಜವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ, ಕ್ಷತ್ರಿಯರನ್ನು ಕ್ಷತ್ರಿಯರೆಂದಾಗ ಬೇಸರವಾಗುವುದಿಲ್ಲ, ವೈಶ್ಯರನ್ನ ವೈಶ್ಯರೆಂದಾಗ ಅವರಿಗೆ ಬೇಸರವಾಗುವುದಿಲ್ಲ ಆದರೆ ಶೂದ್ರರಿಗೆ ಬೇಸರವಾಗುತ್ತದೆ, ಏಕೆಂದರೇ ಅವರಲ್ಲಿರುವ ಅಜ್ಞಾನದಿಂದ ಅವರಿಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಇದು ಪಾಕಿಸ್ತಾನವಲ್ಲ, ಭಾರತ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಪಶ್ಚಿಮ ಬಂಗಾಳದಲ್ಲಿ ಅವರ ಆಡಳಿತ ಅಂತ್ಯವಾಗುತ್ತದೆ ಎಂಬ ಕಾರಣದಿಂದ ಅವರು ಭ್ರಮನಿರಸನಗೊಂಡಿದ್ದಾರೆ ಎಂದು ಪ್ರಜ್ಞಾ ಠಾಕೂರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com