
ಗುವಾಹಟಿ: ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್(ಬಿಟಿಸಿ) ಚುನಾವಣೆಯಲ್ಲಿ ಗೆಲುವು ಸಾಧಿಸಿದ ಏಕೈಕ ಕಾಂಗ್ರೆಸ್ ಅಭ್ಯರ್ಥಿ ಸಹ ಸೋಮವಾರ ಬಿಜೆಪಿ ಸೇರುವ ಮೂಲಕ ಹೊಸ ಕೌನ್ಸಿಲ್ ನಲ್ಲಿ ಬಿಜೆಪಿ-ಯುಪಿಪಿಎಲ್-ಜಿಎಸ್ ಪಿ ಮೈತ್ರಿಕೂಟದ ಭಾಗವಾಗುವುದಾಗಿ ಸೋಮವಾರ ಘೋಷಿಸಿದ್ದಾರೆ.
ಶ್ರೀರಾಂಪುರದಲ್ಲಿ ಕಾಂಗ್ರೆಸ್ ನಿಂದ ಆಯ್ಕೆಯಾದ ಸಾಜಲ್ ಸಿನ್ಹಾ ಅವರು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಇಡಿಎ)ದ ಸಂಚಾಲಕ ಹಾಗೂ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷ ಸೇರುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಪಶ್ಚಿಮ ಬಂಗಾಳದ ಗಡಿಯಲ್ಲಿರುವ ತಮ್ಮ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ ಎಂದು ಸಿನ್ಹಾ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯನ ಬಿಜೆಪಿ ಸೇರ್ಪಡೆಯೊಂದಿಗೆ 40 ಸದಸ್ಯ ಬಲದ ಕೌನ್ಸಿಲ್ ನಲ್ಲಿ ಬಿಜೆಪಿ ಬಲ 23ಕ್ಕೆ ಏರಿದೆ.
Advertisement