ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ತಾಪಮಾನ, ಗುಲ್ಮಾರ್ಗ್ ನಲ್ಲಿ ಮೈನಸ್ 10.2 ಡಿಗ್ರಿ ದಾಖಲು

ಕಾಶ್ಮೀರ ಕಣಿವೆಯಲ್ಲಿ ತೀವ್ರ ಚಳಿ ಉಂಟಾಗಿದ್ದು, ರಾತ್ರಿಯ ತಾಪಮಾನ ಘನೀಕರಣ ಬಿಂದು ಮಟ್ಟಕ್ಕಿಂತ ಕೆಳಗಿಳಿದಿದೆ. ಗುಲ್ಮಾರ್ಗ್ ನಲ್ಲಿ ಮೈನಸ್ 10.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ತೀವ್ರ ಚಳಿ ಉಂಟಾಗಿದ್ದು, ರಾತ್ರಿಯ ತಾಪಮಾನ ಘನೀಕರಣ ಬಿಂದು ಮಟ್ಟಕ್ಕಿಂತ ಕೆಳಗಿಳಿದಿದೆ. ಗುಲ್ಮಾರ್ಗ್ ನಲ್ಲಿ ಮೈನಸ್ 10.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕಣಿವೆಯ ಎಲ್ಲಾ ಹವಾಮಾನ ಕೇಂದ್ರಗಳಲ್ಲೂ ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಹಲವು ಡಿಗ್ರಿಗಳಷ್ಟು ಶೂನ್ಯ ತಾಪಮಾನ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಕಾಶ್ಮೀರದ ಗುಲ್ಮಾರ್ಗ್ ಪ್ರದೇಶದಲ್ಲಿ ಮೈನಸ್ 10.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಈ ಚಳಿಗಾಲದ ಪ್ರಥಮ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ರೆಸಾರ್ಟ್ ನಲ್ಲಿ ಕನಿಷ್ಠ ತಾಪಮಾನ ಮೈನಸ್ 5.3ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶ್ರೀನಗರದಲ್ಲಿ ಮೈನಸ್ 3.2ಡಿಗ್ರಿ ಸೆಲ್ಸಿಯಸ್, ಕುಪ್ಪುವಾರ ಜಿಲ್ಲೆಯಲ್ಲಿ ಮೈನಸ್ 2.3ಡಿಗ್ರಿ ಸೆಲ್ಸಿಯಸ್, ಖಾಝಿಗುಂಡ್ ನ ಗೇಟ್ ವೇ ನಗರದಲ್ಲಿ ಮೈನಸ್ 2.6ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com