ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್

ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದು ಈ ಸಂಬಂಧ ಮಹಾರಾಷ್ಟ್ರ ಸೈಬರ್ ಅಪರಾಧ ದಳದ ಅಧಿಕಾರಿಗಳಲ್ಲಿ ಎಫ್ಐಆರ್ ಸಲ್ಲಿಸಿದ್ದಾರೆ.
ಊರ್ಮಿಳಾ ಮಾತೋಂಡ್ಕರ್
ಊರ್ಮಿಳಾ ಮಾತೋಂಡ್ಕರ್

ಮುಂಬೈ: ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದು ಈ ಸಂಬಂಧ ಮಹಾರಾಷ್ಟ್ರ ಸೈಬರ್ ಅಪರಾಧ ದಳದ ಅಧಿಕಾರಿಗಳಲ್ಲಿ ಎಫ್ಐಆರ್ ಸಲ್ಲಿಸಿದ್ದಾರೆ.

ಫೋಟೋ-ವಿಡಿಯೋ ಹಂಚಿಕೆ ಅಪ್ಲಿಕೇಶನ್‌ನಲ್ಲಿ ನೇರ ಸಂದೇಶಕ್ಕೆ(ಡೈರೆಕ್ಟ್ ಮೆಸೇಜ್) ಪ್ರತಿಕ್ರಿಯಿಸಿದ ನಂತರ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಹ್ಯಾಕ್ ಮಾಡಲಾಗಿದೆ ಎಂದು ಮಾತೋಂಡ್ಕರ್ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

"ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ  @instagram. ಮೊದಲು ಅವರು ನಿಮ್ಮ ಖಾತೆಯಿಂದ ಕೆಲ ಡೈರೆಕ್ಟ್ ಮೆಸೇಜ್ ಕಳಿಸಿ ಕೆಲ ಸ್ಟೆಪ್ ಗಳನ್ನು ಅನುಸರಿಸಲು ಮತ್ತು ಖಾತೆಯನ್ನು ಪರಿಶೀಲಿಸಲು ಕೇಳುತ್ತಾರೆ ಮತ್ತು ನಂತರ ಅದು ಹ್ಯಾಕ್ ಆಗುತ್ತದೆ. ನಿಜವೆ?#NotDone," ಎಂದು ಮಾತೋಂಡ್ಕರ್ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರೆದಿದ್ದಾರೆ .

ನಂತರದ ಟ್ವೀಟ್‌ನಲ್ಲಿ, ಅಕೌಂಟ್ ಹ್ಯಾಕ್ ಬಗ್ಗೆ ತಾನು ಮಹಾರಾಷ್ಟ್ರ ಸೈಬರ್‌ ಅಧಿಕಾರಿಗಳಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಸಿದ್ದೇನೆ, ಮಹಿಳೆಯರು "ಸೈಬರ್ ಅಪರಾಧಗಳನ್ನು" ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಮಾತೋಂಡ್ಕರ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಪೋಸ್ಟ್‌ಗಳನ್ನು ಅಳಿಸಿಹಾಕಲಾಗಿದ್ದು, ಡಿಸ್ಪ್ಲೆ ನೇಮ್ ಅನ್ನು "ಇನ್‌ಸ್ಟಾಗ್ರಾಮ್ ಸಪೋರ್ಟ್" ಎಂದು ಬದಲಿಸಲಾಗಿದೆ.

"ಇದು ನಿಮಗೆ ಕಳುಹಿಸಲಾದ ಸ್ವಯಂಚಾಲಿತ ಸಂದೇಶವಾಗಿದೆ. ನೀವು ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ್ದರೆ, ನೀವು ಸ್ವಯಂಚಾಲಿತ ಸಂದೇಶವನ್ನು ಸ್ವೀಕರಿಸುತ್ತೀರಿ" ಎಂದ್ಯ್ ಮೆಸೇಜ್ ಒಂದು ಆಕೆಯ ಪ್ರೊಫೈಲ್‌ನಲ್ಲಿ ಕಾಣಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಉತ್ತರ ಮುಂಬೈ ಕ್ಷೇತ್ರದಿಂದ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾತೋಂಡ್ಕರ್ ಇತ್ತೀಚೆಗೆ ಕೈ ಪಕ್ಷ ತೊರೆದು ಶಿವಸೇನೆ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com