ಮೃತ ರೈತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರಕ್ಕೆ ಕಿಸಾನ್ ಕಾಂಗ್ರೆಸ್ ಒತ್ತಾಯ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್- ಹರ್ಯಾಣ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟಿರುವ 22 ರೈತರಿಗೆ ತಲಾ 1 ಕೋಟಿ ರೂಪಾಯಿಗಳನ ಪರಿಹಾರವಾಗಿ ನೀಡಬೇಕು ಎಂದು ಕಿಸಾನ್ ಕಾಂಗ್ರೆಸ್ ಒತ್ತಾಯಿಸಿದೆ.
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

 ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್- ಹರ್ಯಾಣ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟಿರುವ 22 ರೈತರಿಗೆ ತಲಾ 1 ಕೋಟಿ ರೂಪಾಯಿಗಳನ ಪರಿಹಾರವಾಗಿ ನೀಡಬೇಕು ಎಂದು ಕಿಸಾನ್ ಕಾಂಗ್ರೆಸ್ ಒತ್ತಾಯಿಸಿದೆ.

ಕಿಸಾನ್ ಕಾಂಗ್ರೆಸ್ ನ ಉಪಾಧ್ಯಕ್ಷ ಸುರೇಂದ್ರ ಸೋಲಂಕಿ  ಈ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದು, 22 ರೈತರ ಆತ್ಮಹತ್ಯೆಗೆ ಮೋದಿ ನೇತೃತ್ವದ ಸರ್ಕಾರವೇ ಹೊಣೆ ಎಂದು ಆರೋಪಿಸಿದ್ದಾರೆ.

23 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ಅತ್ಯಂತ ಶೀತ ವಾತಾವರಣದಿಂದ ಕೂಡಿದೆ. 23 ದಿನಗಳಲ್ಲಿ 22 ಮಂದಿ ರೈತರು ಜೀವ ಕಳೆದುಕೊಂಡಿದ್ದಾರೆ, ಇದಕ್ಕೆ ಬಿಜೆಪಿಯೇ ನೇರ ಹೊಣೆ, ಎಂದು ಸೋಲಂಕಿ ಹೇಳಿದ್ದಾರೆ.

130 ಕೋಟಿ ಮಂದಿ ಇರುವ ರಾಷ್ಟ್ರದಲ್ಲಿ ಜನರ ಅಗತ್ಯತೆಗಳನ್ನು ಪೂರೈಸುವವರು ರೈತರಾಗಿದ್ದಾರೆ. ಕೃಷಿ ದೇಶದ ಜಿಡಿಪಿಗೆ ಶೇ.15 ರಷ್ಟು ಕೊಡುಗೆ ನೀಡುತ್ತದೆ.

ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು, ಮೃತ ರೈತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಸೋಲಂಕಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com