ಸ್ವದೇಶಿ ನಿರ್ಮಿತ 3 ಅತ್ಯಾಧುನಿಕ ಸಾಧನಗಳನ್ನು ಸೇನೆಯ ಮೂರು ಪಡೆಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಸ್ತಾಂತರ

ಮೂರು ಸ್ವದೇಶಿ ಅಭಿವೃದ್ಧಿಪಡಿಸಿರುವ ವ್ಯವಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಯುಸೇನೆ, ಭೂಸೇನೆ ಮತ್ತು ನೌಕಸೇನೆಗೆ ಹಸ್ತಾಂತರಿಸಿದರು.
ದೆಹಲಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಸ್ತಾಂತರ
ದೆಹಲಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಹಸ್ತಾಂತರ
Updated on

ನವದೆಹಲಿ: ಮೂರು ಸ್ವದೇಶಿ ಅಭಿವೃದ್ಧಿಪಡಿಸಿರುವ ವ್ಯವಸ್ಥೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಾಯುಸೇನೆ, ಭೂಸೇನೆ ಮತ್ತು ನೌಕಸೇನೆಗೆ ಹಸ್ತಾಂತರಿಸಿದರು.

ನಿನ್ನೆ ದೆಹಲಿಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ)ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಭಾರತೀಯ ನೌಕಾಪಡೆ ಬಂದರು ಪರಿಸ್ಥಿತಿ ಅರಿವು ವ್ಯವಸ್ಥೆ(ಐಎಂಎಸ್ಎಎಸ್) ನ್ನು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್, ಅಸ್ಟ್ರಾ ಎಂಕೆ -1 ಕ್ಷಿಪಣಿಯನ್ನು ವಾಯುಪಡೆ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಮತ್ತು ಗಡಿ ಕಣ್ಗಾವಲು ವ್ಯವಸ್ಥೆ(ಬಾಸ್ಸ್) ನ್ನು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಅವರಿಗೆ ಹಸ್ತಾಂತರಿಸಿದರು.

ಎಲ್ಲಾ ರೀತಿಯ ಹವಾಮಾನಕ್ಕೆ ಸಲ್ಲುವ ವಿದ್ಯುತ್ ಸರ್ವೇಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಲಾಗಿದ್ದು ಅದನ್ನು ಇನ್ಸ್ಟ್ರುಮೆಂಟ್ಸ್ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್(ಐಆರ್ ಡಿಇ) ಡೆಹ್ರಾಡೂನ್ ಅಭಿವೃದ್ಧಿಗೊಳಿಸಿದೆ. ಅದನ್ನು ಈಗ ಲಡಾಕ್ ಗಡಿಯಲ್ಲಿ ರಾತ್ರಿ-ಹಗಲು ಕಣ್ಗಾವಲಿಗೆ ನಿಯೋಜಿಸಲಾಗಿದೆ.

ದೂರಸ್ಥ ಕಾರ್ಯಾಚರಣೆಯ ಸಾಮರ್ಥ್ಯದೊಂದಿಗೆ ಕಠಿಣವಾದ ಎತ್ತರದ-ಉಪ-ಶೂನ್ಯ ತಾಪಮಾನ ಪ್ರದೇಶಗಳಲ್ಲಿನ ಒಳನುಗ್ಗುವಿಕೆಗಳನ್ನು ಸ್ವಯಂಚಾಲಿತವಾಗಿ ಕಂಡುಹಿಡಿಯುವ ಮೂಲಕ ವ್ಯವಸ್ಥೆಯು ಮೇಲ್ವಿಚಾರಣೆ ಮತ್ತು ಕಣ್ಗಾವಲು ಸುಗಮಗೊಳಿಸುತ್ತದೆ. ಈ ವ್ಯವಸ್ಥೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಮಚ್ಲಿಪಟ್ಟಣಂ ಉತ್ಪಾದಿಸುತ್ತಿದೆ.

ಐಎಂಎಸ್ಎಎಸ್ ಅತ್ಯಾಧುನಿಕ, ಸಂಪೂರ್ಣ ಸ್ಥಳೀಯ, ಉನ್ನತ ಕಾರ್ಯಕ್ಷಮತೆಯ ಸಾಫ್ಟ್‌ವೇರ್ ಸಿಸ್ಟಮ್ ಆಗಿದ್ದು ಅದು ಜಾಗತಿಕ ನೌಕಾಪಡೆಯ ಪರಿಸ್ಥಿತಿ ಚಿತ್ರವನ್ನು, ಸಾಗರ ಯೋಜನಾ ಸಾಧನಗಳು ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಭಾರತೀಯ ನೌಕಾಪಡೆಗೆ ಒದಗಿಸುತ್ತದೆ. ನೌಕಾ ಕಮಾಂಡ್ ಮತ್ತು ನಿಯಂತ್ರಣವನ್ನು ಸಕ್ರಿಯಗೊಳಿಸಲು ಈ ವ್ಯವಸ್ಥೆಯು ಸಮುದ್ರದಲ್ಲಿನ ಪ್ರತಿಯೊಂದು ಹಡಗುಗಳಿಗೆ ನೌಕಾ ಹೆಚ್ಕ್ಯುನಿಂದ ಬಂದರು ಕಾರ್ಯನಿರ್ವಹಣೆಯ ಚಿತ್ರವನ್ನು ಒದಗಿಸುತ್ತದೆ.

ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ರೊಬೊಟಿಕ್ಸ್ (ಸಿಎಐಆರ್), ಬೆಂಗಳೂರು ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಉತ್ಪನ್ನವನ್ನು ಪರಿಕಲ್ಪನೆ ಮಾಡಿ ಅಭಿವೃದ್ಧಿಪಡಿಸಿದೆ ಮತ್ತು ಬಿಇಎಲ್, ಬೆಂಗಳೂರಿನೊಂದಿಗೆ ಅದರ ಅನುಷ್ಠಾನವನ್ನು ನಿರ್ವಹಿಸುತ್ತಿದೆ.

ಅಸ್ಟ್ರಾ-ಎಂಕೆ 1 ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಬಿಯಾಂಡ್ ವಿಷುಯಲ್ ರೇಂಜ್ (ಬಿವಿಆರ್) ಕ್ಷಿಪಣಿಯಾಗಿದ್ದು, ಇದನ್ನು ಸುಖೋಯ್ -30, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ), ಮಿಗ್ -29 ಮತ್ತು ಮಿಗ್ -29 ಕೆ ನಿಂದ ಉಡಾಯಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com