ಪಕ್ಷಾಂತರ ಪರ್ವ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ: ಪಶ್ಚಿಮ ಬಂಗಾಳ ಸಚಿವ
ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇರುವಂತೆಯೇ ಪಕ್ಷಾಂತರ ಪರ್ವ ಆರಂಭವಾಗಿದ್ದು, ಆಡಳಿತರೂಢ ಟಿಎಂಸಿಯ ಹಲವು ನಾಯಕರು ಬಿಜೆಪಿ ಸೇರಿದ್ದಾರೆ. ಇನ್ನು ಪಕ್ಷಾಂತರಿಗಳ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ ಎಂದಿರುವ ಪಶ್ಚಿಮ ಬಂಗಾಳ ಸಚಿವ ಸುಬ್ರತ ಮುಖರ್ಜಿ ಅವರು, "ದೇಶದ್ರೋಹಿಗಳು ಮತ್ತು ಬ್ಯಾಕ್‌ಸ್ಟ್ಯಾಬರ್‌ಗಳು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದ್ದಾರೆ" ಎಂದಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಂಚಾಯತ್ ಸಚಿವ, ಪಕ್ಷಾಂತರದಿಂದ ನಮ್ಮ ಪಕ್ಷ ಆಘಾತಕ್ಕೊಳಗಾಗುವುದಿಲ್ಲ. ಏಕೆಂದರೆ ಇದು ವಿಧಾನಸಭಾ ಚುನಾವಣೆಯ ಮೇಲೆ "ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಹೇಳಿದ್ದಾರೆ.
ಇಂತಹ ಬೆಳವಣಿಗೆಗಳಿಗೆ ಟಿಎಂಸಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಮತ್ತು 294 ವಿಧಾನಸಭಾ ಸ್ಥಾನಗಳಲ್ಲಿ 250 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ ಬಿಜೆಪಿಯ ಹೇಳಿಕೆ "ಅಸಂಬದ್ಧ" ಎಂದಿದ್ದಾರೆ.
ನಿನ್ನೆ ಮಿಡ್ನಾಪುರದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯ ವೇಳೆ ಟಿಎಂಸಿ ಹಿರಿಯ ನಾಯಕ, ಮಾಜಿ ಸಚಿವ ಸುವೇಂದು ಅಧಿಕಾರಿ, ಟಿಎಂಸಿಯ ಒಬ್ಬ ಸಂಸದ ಮತ್ತು ಐವರು ಶಾಸಕರು ಬಿಜೆಪಿ ಸೇರಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ