ಅಯೋಧ್ಯೆ: ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದ್ದು, ಮಂದಿರದ ಸುತ್ತಮುತ್ತಲ ಪ್ರದೇಶವನ್ನು ಅಲಂಕರಿಸುವುದದಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಲನಕ್ಷೆ ಸಿದ್ಧಪಡಿಸಿದೆ.
ವಿವಿಧ ಗಿಡಗಳು ಹಾಗೂ ಮರಗಳನ್ನು ನೆಡುವುದಕ್ಕೆ ಟ್ರಸ್ಟ್ ಯೋಜನೆ ರೂಪಿಸಿದ್ದು, ರಾಮಾಯಣದಲ್ಲಿ ಉಲ್ಲೇಖಗೊಂಡಿದ್ದ ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ತ್ರೇತಾಯುಗದ ಮರಗಳ ಪ್ರಬೇಧದ ಮರಗಳನ್ನೇ ಮಂದಿರದ ಸಂಕೀರ್ಣದಲ್ಲಿ ನೆಡಲಾಗುತ್ತದೆ.
ಟ್ರಸ್ಟ್ ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚನೆಯಾಗಿದ್ದು 65 ಎಕರೆ ಭೂಮಿಯಲ್ಲಿ ಈ ಮರಗಳನ್ನು ಬೆಳೆಸಲಾಗುತ್ತದೆ.
ಪೀಪಲ್, ಬರ್ಗಾದ್ (ಆಲದ ಮರ) ದೇವದಾರು, ಸೀತಾ ಅಶೋಕ, ಪಾರಿಜಾತ, ಸಾಲ್, ಮಾವಿನ ಮರ, ನಾಗಕೇಸರ, ಶ್ರೀಗಂಧದ ಮರಗಳು ರಾಮಾಯಣದಲ್ಲಿ ವಿಶೇಷವಾಗಿ ಉಲ್ಲೇಖಗೊಂಡಿದೆ. ರಾಮಮಂದಿರದ ಪ್ರದೇಶದಲ್ಲಿ ನಕ್ಷತ್ರ ವಾಟಿಕಾ ಪ್ರಮುಖ ಆಕರ್ಷಣೆಯಾಗಿರಲಿದ್ದು, ಪ್ರತಿಯೊಂದು ಮರವೂ ಒಂದೊಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾಗಿರುವ ರಾಶಿಯನ್ನು ಪ್ರತಿನಿಧಿಸುತ್ತದೆ.
Advertisement