ಅಪರಾಧಿಗಳ ಸಮವಸ್ತ್ರ ಧರಿಸಲು ಇಂದ್ರಾಣಿ ಮುಖರ್ಜಿ ನಿರಾಕರಣೆ; ಕೋರ್ಟ್ ಗೆ ಅರ್ಜಿ

ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಕಾರಾಗೃಹದಲ್ಲಿ ಅಪರಾಧಿಗಳಿಗೆ ನೀಡಲಾಗುವ ಸಮವಸ್ತ್ರ (ಹಸಿರು ಸೀರೆ) ಧರಿಸುವುದರಿಂದ ವಿನಾಯಿತಿ ನೀಡಬೇಕೆಂದು ವಿಶೇಷ ಸಿಬಿಐ ಕೋರ್ಟ್ ಮೊರೆ ಹೋಗಿದ್ದಾರೆ. 
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ

ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಕಾರಾಗೃಹದಲ್ಲಿ ಅಪರಾಧಿಗಳಿಗೆ ನೀಡಲಾಗುವ ಸಮವಸ್ತ್ರ (ಹಸಿರು ಸೀರೆ) ಧರಿಸುವುದರಿಂದ ವಿನಾಯಿತಿ ನೀಡಬೇಕೆಂದು ವಿಶೇಷ ಸಿಬಿಐ ಕೋರ್ಟ್ ಮೊರೆ ಹೋಗಿದ್ದಾರೆ. 

ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಬೈಕುಲ್ಲಾ ಜೈಲಿನ ಅಧಿಕಾರಿಗೆ ಕೋರ್ಟ್ ಸೂಚನೆ ನೀಡಿದೆ. 

ನಾನು ವಿಚಾರಣಾಧೀನ ಖೈದಿಯಾಗಿದ್ದೇನೆ. ಆದರೂ ಸಹ ನನಗೆ ಅಪರಾಧಿಗಳು ಧರಿಸುವ ಸಮವಸ್ತ್ರವನ್ನು ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಇಂದ್ರಾಣಿ ಮುಖರ್ಜಿ ಹೇಳಿದ್ದಾರೆ. ಅರ್ಜಿ ವಿಚಾರಣೆ ಜ.5 ಕ್ಕೆ ನಡೆಯಲಿದೆ. 

ಹಣಕಾಸಿನ ವಿವಾದದಲ್ಲಿ ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ ಹಾಗೂ ಇಂದ್ರಾಣಿ ಮುಖರ್ಜಿಯ ಮಾಜಿ ಪತಿ ಸಂಜೀವ್ ಖನ್ನಾ ಶೀನಾ ಬೋರಾಳನ್ನು ಹತ್ಯೆ ಮಾಡಿದ ಆರೋಪವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com