ಅನುಚಿತ ನಡವಳಿಕೆ: ಡೆಹ್ರಾಡೂನ್ ಜಿಲ್ಲಾ ನ್ಯಾಯಾಧೀಶ ಪ್ರಶಾಂತ್ ಜೋಶಿ ಅಮಾನತು

ಉತ್ತರಾಖಂಡ ಹೈಕೋರ್ಟ್ ಡೆಹ್ರಾಡೂನ್ ಜಿಲ್ಲಾ ನ್ಯಾಯಾಧೀಶ ಪ್ರಶಾಂತ್ ಜೋಶಿಯವರನ್ನು ಅಮಾನತುಗೊಳಿಸಿದೆ ಹಾಗೂ ಅವರು 'ನ್ಯಾಯಾಂಗ ಅಧಿಕಾರಿ' ಆಗಿ ಅನುಚಿತ ನಡವಳಿಕೆ ತೋರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಅನುಚಿತ ನಡವಳಿಕೆ: ಡೆಹ್ರಾಡೂನ್ ಜಿಲ್ಲಾ ನ್ಯಾಯಾಧೀಶ ಪ್ರಶಾಂತ್ ಜೋಶಿ ಅಮಾನತು

ಡೆಹ್ರಾಡೂನ್: ಉತ್ತರಾಖಂಡ ಹೈಕೋರ್ಟ್ ಡೆಹ್ರಾಡೂನ್ ಜಿಲ್ಲಾ ನ್ಯಾಯಾಧೀಶ ಪ್ರಶಾಂತ್ ಜೋಶಿಯವರನ್ನು ಅಮಾನತುಗೊಳಿಸಿದೆ ಹಾಗೂ ಅವರು 'ನ್ಯಾಯಾಂಗ ಅಧಿಕಾರಿ'ಆಗಿ ಅನುಚಿತ ನಡವಳಿಕೆ ತೋರಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಡಿಸೆಂಬರ್ 22, 2020 ರ, ಅವರ ಕಾರ್ಯ ಮತ್ತು ನಡವಳಿಕೆ್ ಅನುಚಿತವಾಗಿದೆ, ಇದು ಉತ್ತರಾಖಂಡ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು, 2002 ರ ಅನೇಕ ನಿಯಮಗಳನ್ನು ಉಲ್ಲಂಘಿಸುವುದರ ಜೊತೆಗೆ ಗಂಭೀರ ದುಷ್ಕೃತ್ಯಕ್ಕೆ ಕಾರಣವಾಗಿದೆ ಎಂದು ಹೇಳಿದೆ.

ಡಿಸೆಂಬರ್ 21 ಮತ್ತು 22 ರಂದು ಕ್ಯಾಂಪ್ ಕೋರ್ಟ್ ಗೆ ಹಾಜರಾಗಲು ಮಸ್ಸೂರಿಗೆ ಪ್ರಯಾಣಿಸುತ್ತಿದ್ದಾಗ ನ್ಯಾಯಾಧೀಶರು ತಮ್ಮ ಅಧಿಕೃತ 'ಜಿಲ್ಲಾ ನ್ಯಾಯಾಧೀಶ' ಎಂಬ ಫಲಕವನ್ನು ಖಾಸಗಿ ಆಡಿ ಕಾರಿನಲ್ಲಿ ಬಳಸಿದ್ದಾರೆಂದು ಆರೋಪ ಕೇಳಿಬಂದ ನಂತರ ಹೈಕೋರ್ಟ್ ಈ ಮೇಲಿನ ಕ್ರಮ ಕೈಗೊಂಡಿದೆ.

2020 ರ ಡಿಸೆಂಬರ್ 22 ರಂದು ಹೈಕೋರ್ಟ್ ನೀಡಿದ ಆದೇಶದಲ್ಲಿ, "ಅಮಾನತುಗೊಂಡ ಅವಧಿಯಿಂದ ಮುಂದಿನ ಆದೇಶದವರೆಗೆಪ್ರಶಾಂತ್ ಜೋಶಿ ಅವರು ಜಿಲ್ಲಾ ನ್ಯಾಯಾಧೀಶರ ಪ್ರಧಾನ ಕಚೇರಿಯ ರುದ್ರಪ್ರಯಾಗದೊಡನೆ ಸಂಬಂಧ ಹೊಂದಿರಲಿದ್ದಾರೆ. ಅಲ್ಲದೆ ಅವರು ನ್ಯಾಯಮೂರ್ತುಗಳ ಪೂರ್ವಾನುಮತಿ ಪಡೆಯದೆ ಸ್ಟೇಷನ್ ನಿಂದ ಹೊರಹೋಗುವಂತಿ;ಲ್ಲ" ಎಂದು ನ್ಯಾಯಾಲಯ ಹೇಳೀದೆ.

ನ್ಯಾಯಾಧೀಶರ ಈ ಕ್ರಮ "ಕಾರಿನ ಮಾಲೀಕರು ಮತ್ತು ನಿವಾಸಿಗಳನ್ನುದುಷ್ಕೃತ್ಯಗಳಿಂದ ರಕ್ಷಿಸುವ ಉದ್ದೇಶವನ್ನು ಹೊಂದಿರಬಹುದು" ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಾರಿನ ಮಾಲೀಕ, ಕೆವಾಲ್ ಕ್ರಿಶನ್ ಸಾಯಿನ್ ಅವರ ವಿರುದ್ಧ ಡೆಹ್ರಾಡೂನ್‌ನ ರಾಜ್‌ಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420, 467, 468, 471 ಮತ್ತು 120-ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಎಫ್‌ಐಆರ್ ರದ್ದುಗೊಳಿಸುವಂತೆ ಸೊಯಿನ್ ನೀಡಿದ ರಿಟ್ ಅರ್ಜಿಯು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಡೆಹ್ರಾಡೂನ್‌ನ ಜಿಲ್ಲಾ ನ್ಯಾಯಾಧೀಶರೆನ್ನುವ ಫಲಕವಿದ್ದ ವಾಹನವನ್ನು ಮುಸ್ಸೂರಿಯ ಹೈಕೋರ್ಟ್ ಅತಿಥಿ ಗೃಹದ ಹೊರಗೆ ಇರಿಸಲಾಗಿತ್ತು, ಅಲ್ಲಿ ಸಾಮಾನ್ಯವಾಗಿ ಕ್ಯಾಂಪ್ ಕೋರ್ಟ್ ನಡೆಯುತ್ತದೆ.

ಇನ್ನು ಅಮಾನತುಗೊಳಿಸಿದ ಅವಧಿಯಲ್ಲಿ ನ್ಯಾಯಾಧೀಶರು ತನ್ನ ವೇತನದ ಅರ್ಧದಷ್ಟು ಮತ್ತು ಇತರ ಭತ್ಯೆಗಳನ್ನು ಪ್ರಮಾಣಪತ್ರವನ್ನು ನೀಡಿದರೆ ಮಾತ್ರ ಪಡೆಯುತ್ತಾರೆ.  ಅಲ್ಲದೆ ಅವರು "ಯಾವುದೇ ಉದ್ಯೋಗ, ವ್ಯವಹಾರ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವುದು ಇಲ್ಲ" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com