ಏಪ್ರಿಲ್ ನಂತರ ಮೊದಲ ಬಾರಿಗೆ ಮುಂಬೈನ ಧಾರಾವಿಯಲ್ಲಿ ಶೂನ್ಯ ಕೋವಿಡ್ ಪ್ರಕರಣ ದಾಖಲು

 ಏಷ್ಯಾದ ಅತಿದೊಡ್ಡ ಕೊಳೆಗೇರಿ ಎನಿಸಿದ ಮುಂಬೈನ ಧಾರಾವಿ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೋನಾವೈರಸ್ ಸೋಂಕು ವರದಿಯಾಗಿಲ್ಲ ಎಂದು ನಾಗರಿಕ ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ತಿಳಿಸಿದ್ದಾರೆ.
ಧಾರಾವಿ
ಧಾರಾವಿ

ಮುಂಬೈ: ಏಷ್ಯಾದ ಅತಿದೊಡ್ಡ ಕೊಳೆಗೇರಿ ಎನಿಸಿದ ಮುಂಬೈನ ಧಾರಾವಿ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೋನಾವೈರಸ್ ಸೋಂಕು ವರದಿಯಾಗಿಲ್ಲ ಎಂದು ನಾಗರಿಕ ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ತಿಳಿಸಿದ್ದಾರೆ.

ಜಾಗತಿಕ ಜನದಟ್ಟಣೆಯ ನಗರ ವಸಾಹತುಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಮೊದಲ ಕೊರೋನಾ ರೋಗಿಯನ್ನು ಪತ್ತೆ ಮಾಡಿದ ಏಪ್ರಿಲ್ 1 ರ ನಂತರ ಇದೇ ಮೊದಲ ಬಾರಿಗೆ, ಯಾವ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಧಾರಾವಿ ಪ್ರದೇಶದಲ್ಲಿ ಇದುವರೆಗೆ 3,788 ಕೊರೊಣಾ ಪ್ರಕರಣಗಳುವರದಿಯಾಗಿದ್ದು ಸಧ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 12, ಇವುಗಳಲ್ಲಿ ಎಂಟು ಮಂದಿ ಹೋಂ ಐಸೋಲೇಷನ್ ನಲ್ಲಿದ್ದರೆ ನಾಲ್ವರು ಕೋವಿಡ್ ಆರೈಕೆ ಕೇಂದ್ರದಲ್ಲಿದ್ದಾರೆ ಎಂದು ನಾಗರಿಕ ಅಧಿಕಾರಿ ತಿಳಿಸಿದ್ದಾರೆ.

ಧಾರಾವಿಯಲ್ಲಿ ಈವರೆಗೆ 3,464 ಜನರು ಚೇತರಿಸಿಕೊಂಡಿದ್ದಾರೆ, ಅಲ್ಲಿ 6.5 ಲಕ್ಷ ಜನರು 2.5 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಕೊಳೆಗೇರಿಯಲ್ಲಿ ನೆಲೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com