ನವದೆಹಲಿ: ರೈತರ ಪ್ರತಿಭಟನೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡುವುದಕ್ಕೆ ಬಳಸಿಕೊಂಡಿರುವ ರಾಹುಲ್ ಗಾಂಧಿ ಕವಿತೆಯೊಂದನ್ನು ಟ್ವೀಟ್ ಮಾಡಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ.
ಪ್ರತಿಭಟನಾ ನಿರತ ರೈತರು ಈ ಸರ್ಕಾರಕ್ಕೆ ಬಗ್ಗದೇ, ಹೆದರದೇ ಮುಂದೆ ನಡೆಯಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ದ್ವಾರಕಾ ಪ್ರಸಾದ್ ಮಹೇಶ್ವರಿ ಅವರ ಪ್ರಸಿದ್ಧ ಪದ್ಯ/ ಕವಿತೆ ವೀರ್ ತುಮ್ ಬಡೆ ಚಲೋ ಎಂಬ ಕವಿತೆಯನ್ನು ಸ್ವಲ್ಪ ಬದಲಾವಣೆ ಮಾಡಿ ಬರೆದು ರೈತರನ್ನು ಬೆಂಬಲಿಸಿದ್ದಾರೆ.
ಮುಂದೆ ಸಾಗುತ್ತಿರಿ, ಓ ಧೀರರೇ, ತಾಳ್ಮೆಯಿಂದ ಮುಂದೆ ಸಾಗಿ, ನೀರಿನ ಫಿರಂಗಿ ಶವರ್ ಅಥವಾ ಬ್ಲಸ್ಟರ್ ಗಳಿಗೆ ಅಂಜದಿರಿ, ಓ ಧೀರರೇ... ದೃಢ ಹೆಜ್ಜೆ ಇಡಿ, ಓ ಅನ್ನದಾತರೇ, ಮುಂದೆ ನುಗ್ಗಿ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ರೈತರನ್ನು ಉತ್ತೇಜಿಸಿದ್ದಾರೆ.
ಸರ್ಕಾರ ಪ್ರತಿಭಟನಾ ನಿರತ ರೈತರ ಮಾತುಗಳನ್ನು ಕೇಳಲೇಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು.
Advertisement