
ಚಂಡೀಗಢ: ಸಿಖ್ಖರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಕ್ಕೆ ಮಾಜಿ ಕ್ರಿಕೆಟಿಗ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕ್ಷಮೆಯಾಚಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಅವರು ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸಿದ್ದರು. ಇದು ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಅಕಾಲ್ ತಖ್ತ್ ಜಾಥೆದಾರ್ ಗಿಯಾನಿ ಹರಪ್ರೀತ್ ಸಿಂಗ್ ಆಗ್ರಹಿಸಿದ್ದರು.
ಇದೊಂದು ದುರದೃಷ್ಟಕರ ಮತ್ತು ಇದು ಸಿಖ್ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಈ ಬಗ್ಗೆ ಸಮುದಾಯದ ಹಲವರು ನನಗೆ ದೂರು ಸಲ್ಲಿಸಿದ್ದರು ಎಂದು ಹರಪ್ರೀತ್ ಸಿಂಗ್ ಹೇಳಿದ್ದರು.
ನನ್ನಿಂದ ಸಿಖ್ ಸಮುದಾಯದ ಭಾವನೆಗೆ ಧಕ್ಕೆಯಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.
Advertisement