ಕೋವಿಡ್ ವ್ಯಾಕ್ಸಿನೇಷನ್: 83 ಕೋಟಿ ಸಿರಂಜ್ ಗಳ ಖರೀದಿಗೆ ಕೇಂದ್ರದಿಂದ ಆರ್ಡರ್!

ಬಹುನಿರೀಕ್ಷಿತ  ಕೋವಿಡ್-19 ಲಸಿಕೆಯ ನಿರೀಕ್ಷೆಯಲ್ಲಿರುವಂತೆ ಕೊರೋನಾವೈರಸ್ ವ್ಯಾಕ್ಸಿನೇಷನ್ ಮತ್ತು  ರೋಗ ನಿರೋಧ ಶಕ್ತಿ ವೃದ್ಧಿಸುವ ಕಾರ್ಯಕ್ರಮಕ್ಕಾಗಿ ಸುಮಾರು 83 ಕೋಟಿ ಸಿರಂಜ್ ಗಳನ್ನು ಖರೀದಿಸಲು ಆದೇಶ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ಸಿರಂಜ್ ಗಳ ಸಾಂದರ್ಭಿಕ ಚಿತ್ರ
ಸಿರಂಜ್ ಗಳ ಸಾಂದರ್ಭಿಕ ಚಿತ್ರ

ನವದೆಹಲಿ: ಬಹುನಿರೀಕ್ಷಿತ  ಕೋವಿಡ್-19 ಲಸಿಕೆಯ ನಿರೀಕ್ಷೆಯಲ್ಲಿರುವಂತೆ ಕೊರೋನಾವೈರಸ್ ವ್ಯಾಕ್ಸಿನೇಷನ್ ಮತ್ತು  ರೋಗ ನಿರೋಧ ಶಕ್ತಿ ವೃದ್ಧಿಸುವ ಕಾರ್ಯಕ್ರಮಕ್ಕಾಗಿ ಸುಮಾರು 83 ಕೋಟಿ ಸಿರಂಜ್ ಗಳನ್ನು ಖರೀದಿಸಲು ಆದೇಶ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

35 ಕೋಟಿಗೂ ಹೆಚ್ಚು ಸಿರಂಜ್ ಗಳಿಗೆ ಬಿಡ್ ಗಳನ್ನು ಆಹ್ವಾನಿಸಲಾಗಿದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ 36,433 ವೆಂಟಿಲೇಟರ್ ಗಳನ್ನು ದೇಶಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಿಗೆ ತಲುಪಿಸಲಾಗಿದೆ. ಕೋವಿಡ್-19 ಪೂರ್ವದವರೆಗೂ ದೇಶದಲ್ಲಿ  ಕೇವಲ 16 ಸಾವಿರ ವೆಂಟಿಲೇಟರ್ ಗಳನ್ನು ಹೊಂದಲಾಗಿತ್ತು. ಆದರೆ, ಒಂದು ವರ್ಷದೊಳಗೆ ಸ್ವದೇಶಿ ನಿರ್ಮಿತ 36, 433 ವೆಂಟಿಲೇಟರ್ ಗಳನ್ನು ಸಾರ್ವಜನಿಕರ ಆರೋಗ್ಯ ಸೌಕರ್ಯಕ್ಕಾಗಿ ಪೂರೈಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಆರಂಭದಲ್ಲಿ ಬಹುತೇಕ ಎಲ್ಲಾ ವೆಂಟಿಲೇಟರ್ ಗಳು, ಪಿಪಿಇ ಕಿಟ್ ಗಳು ಮತ್ತು ಎನ್-95 ಮಾಸ್ಕ್ ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ವೈದ್ಯಕೀಯ ಸಲಕರಣೆಗಳನ್ನು ಸರ್ಕಾರ ಯಶಸ್ವಿಯಾಗಿ ಪೂರೈಸುವ ಮೂಲಕ ಸಾಂಕ್ರಾಮಿಕದಿಂದ ಎದುರಾದ ಸವಾಲನ್ನು ನಿಬಾಯಿಸಿರುವುದಾಗಿ ಹೇಳಲಾಗಿದೆ. 

ದಿನಕ್ಕೆ 10 ಲಕ್ಷಕ್ಕೂ ಹೆಚ್ಚು ಪಿಪಿಇ ಕವರಲ್‌ಗಳ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಈಗಾಗಲೇ ಸುಮಾರು 1700 ಸ್ವದೇಶಿ ತಯಾರಕರು ಮತ್ತು ಪೂರೈಕೆದಾರರು ಇದ್ದಾರೆ. ಸುಮಾರು 170 ಲಕ್ಷ ಪಿಪಿಇ ಕಿಟ್ ಗಳನ್ನು ಉಚಿತವಾಗಿ  ವಿತರಣೆ ಮಾಡಲಾಗಿದೆ. ಇದೇ ರೀತಿಯಲ್ಲಿ ಪ್ರತಿದಿನ 1 ಲಕ್ಷ ಎನ್-95 ಮಾಸ್ಕ್ ಗಳ ಉತ್ಪಾದನಾ ಸಾಮರ್ಥ್ಯವಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com