ಇದೇ ಮೊದಲು! ಶೇ.10 ಜೈವಿಕ ಇಂಧನ ಬಳಸಿ ಲೇಹ್ ನಿಂದ ಹಾರಿದ ಐಎಎಫ್‌ಎಎನ್ -32 

ಇದೇ ಮೊದಲ ಬಾರಿಗೆ ಶೇಕಡಾ 10 ರಷ್ಟು ಭಾರತೀಯ ಜೈವಿಕ ಇಂಧನದಮಿಶ್ರಣವನ್ನು ಹೊಂದಿರುವ ಐಎಎಫ್ ಎಎನ್ -32 ವಿಮಾನವು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದೆನ್ನಿಸಿದ ಲೆಹ್‌ನ ಕುಶೋಕ್‌ವಿಮಾನ ನಿಲ್ದಾಣಗಳಲ್ಲಿ ಹಾರಾಟದ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಅಧಿಕೃತಮಾಹಿತಿ ಹೊರಬಿದ್ದಿದೆ.
ಐಎಎಫ್‌ನ ಎಎನ್ -32
ಐಎಎಫ್‌ನ ಎಎನ್ -32
Updated on

ನವದೆಹಲಿ: ಇದೇ ಮೊದಲ ಬಾರಿಗೆ ಶೇಕಡಾ 10 ರಷ್ಟು ಭಾರತೀಯ ಜೈವಿಕ ಇಂಧನದಮಿಶ್ರಣವನ್ನು ಹೊಂದಿರುವ ಐಎಎಫ್ ಎಎನ್ -32 ವಿಮಾನವು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದೆನ್ನಿಸಿದ ಲೆಹ್‌ನ ಕುಶೋಕ್‌ವಿಮಾನ ನಿಲ್ದಾಣಗಳಲ್ಲಿ ಹಾರಾಟದ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಅಧಿಕೃತಮಾಹಿತಿ ಹೊರಬಿದ್ದಿದೆ.

ಬಯೋ-ಜೆಟ್ ಇಂಧನವನ್ನು ನಾನ್ ಎಡಿಬಲ್ ಆಗಿರುವ "ಮರದಿಂದ ಹರಡುವ ಎಣ್ಣೆ"(tree-borne oils) ಗಳಿಂದ ಉತ್ಪಾದಿಸಲಾಗುತ್ತದೆ, ಇದನ್ನುಛತ್ತೀಸ್ ಘರ್ ನ ಬುಡಕಟ್ಟು ಪ್ರದೇಶಗಳಿಂದ ಸಂಗ್ರಹಿಸಲಾಗುವುದು.

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಹಾಗೂ ಭಾರತವು ಕಚ್ಚಾ ಆಮದಿನ ಮೇಲೆ ಅವಲಂಬಿತವಾಗಲು ಐಎಎಫ್‌ನ ಈ ಹೆಜ್ಜೆ ಸಹಕಾರಿಯಾಗಿರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

"ಜನವರಿ 31, 2020 ರಂದು. ಭಾರತೀಯ ವಾಯುಸೇನೆಯ ಎಎನ್ -32 ವಿಮಾನವು ಶೇಕಡಾ 10 ರಷ್ಟು ಭಾರತೀಯ ಬಯೋ ಜೆಟ್ ಇಂಧನದೊಂದಿಗೆಹಾರಟವನ್ನು ನಡೆಸಿದ್ದು ಲೇಹ್‌ನ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದಿಂದ  ಈ ಕಾರ್ಯಚರಣೆ ನಡೆದಿದೆ ಎಂದು ವಿವರಗಳಲ್ಲಿ ಹೇಳಿದೆ.

ವಿಮಾನದ ಎರಡೂ ಎಂಜಿನ್ನುಗಳು ಬಯೋ-ಜೆಟ್ ಸ್ಥಳೀಯ ಇಂಧನದಿಂದ ಚಾಲಿತವಾಗುತ್ತಿರುವುದು ಇದೇ ಮೊದಲು. ವಿಮಾನ ಹಾರಾಟದ ವೇಳೆ ಪರೀಕ್ಷೆ ನಡೆಸಿದ್ದು ಅದರ ಕಾರ್ಯಕ್ಷಮತೆಯನ್ನುಲೇಹ್ ಗೆ ತೆರಳುವ ಮುನ್ನ ಚಂಡೀಘರ್ ವಾಯುನೆಲೆಯಲ್ಲಿ ಪರಿಶೀಲನೆಗೆ ಒಳಪಡಿಸಲಾಗಿತ್ತು. ವಿಮಾನದ ವ್ಯವಸ್ಥೆಪರೀಕ್ಷೆಗಳನ್ನು ಬೆಂಗಳೂರಿನ ಕಾರ್ಯಾಚರಣಾ ಸ್ಕ್ವಾಡ್ರನ್‌ಗಳ ಪರೀಕ್ಷಾ ಪೈಲಟ್‌ಗಳನ್ನು ಒಳಗೊಂಡ ತಂಡವು ನಡೆಸಿತ್ತು. ಸಮುದ್ರ ಮಟ್ಟಕ್ಕಿಂತ 10,682 ಅಡಿ ಎತ್ತರದಲ್ಲಿರುವ ಲೇಹ್ ವಿಶ್ವದ ಅತಿ ಎತ್ತರದ ಮತ್ತು ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಯ ವಾಯುನೆಲೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com