ಬ್ರಿಟೀಷರ ಚಮಚಾಗಳಿಂದ ಗಾಂಧೀಜಿಗೆ ಪ್ರಮಾಣಪತ್ರ ಬೇಕಿಲ್ಲ: ಅನಂತ್‌ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ರಾಷ್ಟ್ರಪಿತನಿಗೆ ಬ್ರಿಟೀಷರ ಚಮಚಾ, ಮತ್ತು ಗೂಢಚಾರರಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು "ಡ್ರಾಮಾ" ಎಂದು ಕರೆದಿದ್ದ ಬಿಜೆಪಿ ಮುಖಂಡ ಅನಂತ್‌ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ಕೈ ಪಾಳಯ ಬ್ರಿಟೀಷರ ಚಮಚಾಗಳಿಂದ ಮಹಾತ್ಮನಿಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದಿದೆ. 
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ

ನವದೆಹಲಿ: ರಾಷ್ಟ್ರಪಿತನಿಗೆ ಬ್ರಿಟೀಷರ ಚಮಚಾ, ಮತ್ತು ಗೂಢಚಾರರಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು "ಡ್ರಾಮಾ" ಎಂದು ಕರೆದಿದ್ದ ಬಿಜೆಪಿ ಮುಖಂಡ ಅನಂತ್‌ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ಕೈ ಪಾಳಯ ಬ್ರಿಟೀಷರ ಚಮಚಾಗಳಿಂದ ಮಹಾತ್ಮನಿಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದಿದೆ.

"ಮಹಾತ್ಮ ಗಾಂಧಿಗೆ ಬ್ರಿಟಿಷರ  ಚಮಚಾ ಮತ್ತು ಗೂಢಚಾರರಾಗಿದ್ದ ಕೇಡರ್ ಗಳಿಂದ  ಪ್ರಮಾಣಪತ್ರ ಅಗತ್ಯವಿಲ್ಲ" ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. "ಬಿಜೆಪಿಯನ್ನು 'ನಾಥುರಾಮ್ ಗೋಡ್ಸೆ ಪಾರ್ಟಿ' ಎಂದು ಮರುನಾಮಕರಣ ಮಾಡುವ ಸಮಯ ಇದು" ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಡೀ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದೊಂದಿಗೆ ನಡೆಸಲಾಯಿತು ಮತ್ತು ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳುವಳಿ ಒಂದು "ಡ್ರಾಮಾ" ಆಗಿತ್ತೆಂದು ಹೇಳಿದ್ದರು.

ಅಲ್ಲದೆ "ಈ ನಾಯಕರು ಎಂದು ಕರೆಯಲ್ಪಡುವ ಯಾರೊಬ್ಬರೂ ಒಮ್ಮೆ ಕೂಡ ಪೋಲೀಸರು ಹೊಡೆದಿಲ್ಲ, ಅವರ ಸ್ವಾತಂತ್ರ್ಯ ಚಳುವಳಿ ಒಂದು ದೊಡ್ಡ ನಾಟಕವಾಗಿತ್ತು. ಇದನ್ನು ಬ್ರಿಟಿಷರ ಅನುಮೋದನೆಯೊಂದಿಗೆ ಈ ನಾಯಕರು ಪ್ರದರ್ಶಿಸಿದರು. ಇದು ನಿಜವಾದ ಹೋರಾಟವಲ್ಲ. ಇದು ಹೊಂದಾಣಿಕೆ ಸ್ವಾತಂತ್ರ್ಯ ಹೋರಾಟ,

"ಕಾಂಗ್ರೆಸ್ ಅನ್ನು ಬೆಂಬಲಿಸುವ ಜನರು ಗಾಂಧೀಜಿಯ ಉಪವಾಸ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುತ್ತಲೇ ಇರುತ್ತಾರೆ. ಇದು ನಿಜವಲ್ಲ. ಸತ್ಯಾಗ್ರಹದಿಂದಾಗಿ ಬ್ರಿಟಿಷರು ದೇಶವನ್ನು ತೊರೆಯಲಿಲ್ಲ" "ಬ್ರಿಟಿಷರು ಹತಾಶೆಯಿಂದ ಸ್ವಾತಂತ್ರ್ಯವನ್ನು ನೀಡಿದರು. ನಾನು ಇತಿಹಾಸವನ್ನು ಓದಿದಾಗ ನನ್ನ ರಕ್ತ ಕುದಿಯುತ್ತದೆ. ಅಂತಹ ಜನರು ನಮ್ಮ ದೇಶದಲ್ಲಿ ಮಹಾತ್ಮರಾಗುತ್ತಾರೆ" ಹೆಗಡೆ ಹೇಳಿದ್ದರು.

ಕಾಂಗ್ರೆಸ್ ನ ಇನ್ನೋರ್ವ ಮುಖಂಡ  ಅಭಿಷೇಕ್ ಸಿಂಗ್ವಿ ಕುಡ ಅನಂತ್ ಹೆಗಡೆ ಅವರ ಮಾತುಗಳಿಗೆ ಕಟು ವಾಕ್ಯಗಳಲ್ಲಿ ತೀಕಿಸಿದ್ದಾರೆ.  ಬಿಜೆಪಿಯ ಹಿರಿಯ ನಾಯಕರಾಗಿರುವ ಹೆಗಡೆ ನೀವು ಗಾಂಧೀಜಿಯನ್ನು ಟೀಕಿಸುತ್ತೀರಿ ಆದರೆ  ನರೇಂದ್ರ ಮೋದಿಯವರನ್ನು ಕಾಯುತ್ತೀರಿ. ಅವರು ಶೇಷವಾಗಿ ಗಾಂಧೀಜಿಯ ಆಲೋಚನೆಗಳನ್ನು ಮರುಬಳಸಿಕೊಂಡು ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತಾರೆ ಎಂದು ಅವರು ಕುಟುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com