ನಾವು ಎಚ್ಚೆತ್ತುಕೊಳ್ಳದಿದ್ದರೆ ಈ ದೇಶದಲ್ಲಿ ಮೊಘಲ್ ಆಡಳಿತ ಬರುವ ದಿನಗಳು ದೂರವಿಲ್ಲ: ಸಂಸದ ತೇಜಸ್ವಿ ಸೂರ್ಯ 

ಇಂದು ದೇಶದ ಬಹುತೇಕ ಸಮುದಾಯಗಳು ಎಚ್ಚರಿಕೆಯಿಂದಿರಬೇಕು, ಇಲ್ಲದಿದ್ದರೆ ಮೊಘಲ್ ಆಡಳಿತ ದೇಶಕ್ಕೆ ಮರಳುವುದಕ್ಕೆ ಹೆಚ್ಚು ಸಮಯವಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಅವರು ಶಹೀನಾ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನುದ್ದೇಶಿಸಿ ಈ ಮಾತುಗಳನ್ನು ಆಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ
Updated on

ನವದೆಹಲಿ: ಇಂದು ದೇಶದ ಬಹುತೇಕ ಸಮುದಾಯಗಳು ಎಚ್ಚರಿಕೆಯಿಂದಿರಬೇಕು, ಇಲ್ಲದಿದ್ದರೆ ಮೊಘಲ್ ಆಡಳಿತ ದೇಶಕ್ಕೆ ಮರಳುವುದಕ್ಕೆ ಹೆಚ್ಚು ಸಮಯವಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಅವರು ಶಹೀನಾ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯನ್ನುದ್ದೇಶಿಸಿ ಈ ಮಾತುಗಳನ್ನು ಆಡಿದ್ದಾರೆ.


ನಿನ್ನೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ನಿರ್ಣಯ ಸಲ್ಲಿಸಿ ಮಾತನಾಡುವ ಸಂದರ್ಭದಲ್ಲಿ ತೇಜಸ್ವಿ ಸೂರ್ಯ, ಈ ದೇಶದಲ್ಲಿ ಬಹುತೇಕ ಸಮುದಾಯಗಳು ಜಾಗ್ರತರಾಗದಿದ್ದರೆ ಮೊಘಲ್ ಆಡಳಿತ ಬರುವ ದಿನಗಳು ದೂರದಲ್ಲಿಲ್ಲ ಎಂದರು.


ಹಲವು ದಶಕಗಳಿಂದ ಸಮಸ್ಯೆಯಾಗಿ ಉಳಿದಿದ್ದ ಹಲವು ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಬಗೆಹರಿಸಿದ್ದಾರೆ. ಭಾರತ ವಿಭಜನೆಯಾದ ನಂತರ ಉಂಟಾದ ಸಮಸ್ಯೆಗಳನ್ನು ಬಗೆಹರಿಸಲು ಎನ್ ಡಿಎ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದೆ. ಹಿಂದೆ ಆಡಳಿತ ನಡೆಸಿದ್ದ ಸರ್ಕಾರಗಳು ಮಾಡಿದ್ದ ಗಾಯಗಳನ್ನು ಗುಣಪಡಿಸದೆ ನವ ಭಾರತ ನಿರ್ಮಾಣ ಸಾಧ್ಯವಿಲ್ಲ ಮತ್ತು ಏಕಾಏಕಿ ಸುಧಾರಣೆ ಕೂಡ ಸಾಧ್ಯವಿಲ್ಲ, ಸಮಯ ಹಿಡಿಯುತ್ತದೆ ಎಂದರು.


ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳಲ್ಲಿ ಹಿಂಸೆ, ಕಿರುಕುಳ ಅನುಭವಿಸುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡುವುದಕ್ಕೆ ಸಿಎಎ ಜಾರಿಗೆ ತರಲಾಗಿದೆ ಹೊರತು ಈ ದೇಶದ ನಾಗರಿಕರ ಪೌರತ್ವ ಕಿತ್ತುಕೊಳ್ಳುವುದಕ್ಕಲ್ಲ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ರದ್ದತಿ, ರಾಮ ಮಂದಿರ ನಿರ್ಮಾಣ, ಬೊಡೊ ಸಮಸ್ಯೆ, ತ್ರಿವಳಿ ತಲಾಖ್ ನಿಷೇಧ ಹೀಗೆ ಹಲವು ಸಮಸ್ಯೆಗಳನ್ನು ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಬಗೆಹರಿಸಿದ್ದಾರೆ. ಇವು ಹಲವು ದಶಕಗಳಿಂದ ಭಾರತದಲ್ಲಿ ಸಮಸ್ಯೆಯಾಗಿಯೇ ಉಳಿದಿದ್ದವು ಎಂದರು.


ತೇಜಸ್ವಿ ಸೂರ್ಯ ಅವರು ಹೀಗೆಂದಾಗ ಸಹಜವಾಗಿ ಸದನದಲ್ಲಿ ತೀವ್ರ ಟೀಕೆಗಳು ಕೇಳಿಬಂದವು. ಕಾಂಗ್ರೆಸ್ ಸದಸ್ಯ ಕೆ ಸುಧಾಕರನ್ ಮಾತನಾಡಿ, ದೇಶದಲ್ಲಿ ಆರ್ಥಿಕ ಸ್ಥಿತಿ ದುಸ್ಥಿತಿಗೆ ತಲುಪಿರುವಾಗ, ನಿರುದ್ಯೋಗ ಸಮಸ್ಯೆ ತೀವ್ರವಾಗಿರುವಾಗ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ 2024ರ ಹೊತ್ತಿಗೆ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸುವ ಕುರಿತ ಹೇಳಿರುವುದು ಎಷ್ಟು ಸರಿ ಎಂದು ಕೇಳಿದರು.

ದೇಶದ ಆರ್ಥಿಕ ಮೂಲಭೂತ ಸ್ಥಿತಿ ಬಲಿಷ್ಠವಾಗಿದೆ ಎಂದು ಸರ್ಕಾರ ಹೇಳುತ್ತದೆ. ಅಮೆರಿಕಾದಲ್ಲಿ ಬ್ಯಾಂಕ್ ಹೂಡಿಕೆದಾರ ಲೆಹ್ಮಾನ್ ಬ್ರದರ್ಸ್ ಅವರ ಉದ್ಯಮ ಕುಸಿಯುವ ಮೊದಲು ಅಲ್ಲಿನ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಕೂಡ ಇದೇ ರೀತಿ ಹೇಳಿಕೆ ನೀಡಿದ್ದರು. ಅಲ್ಲಿ ತೀವ್ರ ಕುಸಿತ ಕಾಣುವ ಮೊದಲು ಜಾರ್ಜ್ ಬುಷ್ ಕೂಡ ಆರ್ಥಿಕ ಮೂಲಭೂತ ಬಲಿಷ್ಠವಾಗಿದೆ ಎಂದು ಹೇಳಿದ್ದರು. ಇದು ಒಪ್ಪುವ ಮಾತೇ ಎಂದು ಕೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com