‘ಡೆಫ್ ಎಕ್ಸ್ ಪೋ’ :ಹಗುರ ಹೆಲಿಕಾಪ್ಟರ್ ನಿರ್ಮಾಣಕ್ಕಾಗಿ ಎಚ್‌ಎಎಲ್‌ ಗೆ ಕಾರ್ಯಾಚರಣೆ ಒಪ್ಪಿಗೆ ಪತ್ರ
‘ಡೆಫ್ ಎಕ್ಸ್ ಪೋ’ :ಹಗುರ ಹೆಲಿಕಾಪ್ಟರ್ ನಿರ್ಮಾಣಕ್ಕಾಗಿ ಎಚ್‌ಎಎಲ್‌ ಗೆ ಕಾರ್ಯಾಚರಣೆ ಒಪ್ಪಿಗೆ ಪತ್ರ

‘ಡೆಫ್ ಎಕ್ಸ್ ಪೋ’ :ಹಗುರ ಹೆಲಿಕಾಪ್ಟರ್ ನಿರ್ಮಾಣಕ್ಕಾಗಿ ಎಚ್‌ಎಎಲ್‌ ಗೆ ಕಾರ್ಯಾಚರಣೆ ಒಪ್ಪಿಗೆ ಪತ್ರ

ಇಲ್ಲಿ ನಡೆಯುತ್ತಿರುವ 11 ನೇ ದ್ವೈವಾರ್ಷಿಕ ರಕ್ಷಣಾ ಪ್ರದರ್ಶನ ಮೇಳ(ಡೆಫ್ ಎಕ್ಸ್ ಪೊ)ದಲ್ಲಿ ಹಗುರ ಬಹುಬಳಕೆ ಹೆಲಿಕಾಪ್ಟರ್ (ಎಲ್‌ಯುಹೆಚ್) ನಿರ್ಮಾಣಕ್ಕಾಗಿ ಹಿಂದೂಸ್ಥಾನ ವಿಮಾನ ಕಾರ್ಖಾನೆ(ಎಚ್ಎಎಲ್) ಆರಂಭಿಕ ಕಾರ್ಯಾಚರಣಾ ಒಪ್ಪಿಗೆ (ಐಒಸಿ) ಪತ್ರ ಪಡೆದುಕೊಂಡಿದೆ.  
Published on

ಲಕ್ನೋ: ಇಲ್ಲಿ ನಡೆಯುತ್ತಿರುವ 11 ನೇ ದ್ವೈವಾರ್ಷಿಕ ರಕ್ಷಣಾ ಪ್ರದರ್ಶನ ಮೇಳ(ಡೆಫ್ ಎಕ್ಸ್ ಪೊ)ದಲ್ಲಿ ಹಗುರ ಬಹುಬಳಕೆ ಹೆಲಿಕಾಪ್ಟರ್ (ಎಲ್‌ಯುಹೆಚ್) ನಿರ್ಮಾಣಕ್ಕಾಗಿ ಹಿಂದೂಸ್ಥಾನ ವಿಮಾನ ಕಾರ್ಖಾನೆ(ಎಚ್ಎಎಲ್) ಆರಂಭಿಕ ಕಾರ್ಯಾಚರಣಾ ಒಪ್ಪಿಗೆ (ಐಒಸಿ) ಪತ್ರ ಪಡೆದುಕೊಂಡಿದೆ.
  
ಒಪ್ಪಿಗೆ ಪತ್ರವು ಪಡೆಯುವುದರೊಂದಿಗೆ ಭಾರತ ವಾಯುಪಡೆ ಮತ್ತು ಭಾರತೀಯ ಸೇನೆಗೆ ಅಗತ್ಯವಿರುವ ಎಲ್‌ಯುಹೆಚ್ ಉತ್ಪಾದನೆಗೆ ಹಾದಿ ಮಾಡಿಕೊಡಲಿದೆ. 
  
ಡೆಫ್ ಎಕ್ಸ್‌ಪೋ 2020ನಲ್ಲಿ ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರ ಸಮ್ಮುಖದಲ್ಲಿ ನಡೆದ ‘ಬಂಧನ್’ ಕಾರ್ಯಕ್ರಮದಲ್ಲಿ ಎಚ್‌ಎಎಲ್ ಸಿಎಂಡಿ ಆರ್ ಮಾಧವನ್ ಅವರು, ಡಿಆರ್‌ಡಿಒ ಅಧ್ಯಕ್ಷ ಜಿ ಸತೀಶ್ ರೆಡ್ಡಿ ಅವರಿಂದ ಐಒಸಿ ಪತ್ರ ಪಡೆದರು.
  
ಈ ಸಂದರ್ಭದಲ್ಲಿ ಮಾತನಾಡಿದ ಮಾಧವನ್, ‘ಎಚ್‌ಎಎಲ್‌ಗೆ ಇದೊಂದು ಮಹತ್ವದ ಸಂದರ್ಭವಾಗಿದೆ. ಇದು ಸ್ವಾವಲಂಬನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗೆಗಿನ ನಮ್ಮ ಬದ್ಧತೆಯನ್ನು ಬಲಪಡಿಸಲಿದೆ. ಎಚ್‌ಎಎಲ್ ತನ್ನ ಗ್ರಾಹಕರ ಅಗತ್ಯತೆಗಳನ್ನು ಸಮಯಕ್ಕೆ ತಕ್ಕಂತೆ ಪೂರೈಸಲು ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com