ಪಾಕಿಸ್ತಾನ ನಾಗರೀಕರನ್ನು ಸ್ಥಳಾಂತರಿಸಲು ಭಾರತ ಸಿದ್ದ.!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಮಾರಣಾಂತಿಕ ಕರೋನಾ ವೈರಸ್ ಪೀಡಿತ ಚೈನಾದ ವುಹಾನ್ ನಗರದಿಂದ ಪಾಕಿಸ್ತಾನಿ ನಾಗರೀಕರನ್ನು ಇಸ್ಲಾಮಾಬಾದ್ ಗೆ ಸ್ಥಳಾಂತರಿಸಲು ತಾನು ಸಿದ್ಧ ಎಂದು ಪ್ರಕಟಿಸಿದೆ
ನೆರೆ ಹೊರೆ ಮೊದಲು ಎಂಬ ತನ್ನ ದೇಶದ ನೀತಿಯಂತೆ ಪಾಕಿಸ್ತಾನಕ್ಕೆ ಈ ವಿಷಯದಲ್ಲಿ ಸಹಕರಿಸಲು ಮುಂದಾಗಿದೆ. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ವುಹಾನ್‌ನಲ್ಲಿರುವ ಭಾರತೀಯರೊಂದಿಗೆ ಎಲ್ಲಾ ನೆರೆಹೊರೆ ದೇಶದ ನಾಗರೀಕರನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ವಾಸ್ತವವಾಗಿ ಚೈನಾದಿಂದ ಭಾರತ ಇತ್ತೀಚೆಗೆ ತನ್ನ ನಾಗರಿಕರನ್ನು ವಿಶೇಷ ವಿಮಾನದ ಮೂಲಕ ವಾಪಸ್ಸು ಕರೆಸಿಕೊಂಡಿದೆ. ಇಂಡೋನೇಷ್ಯಾ ಮತ್ತು ಸುಡಾನ್ ಕೂಡ ತಮ್ಮ ನಾಗರೀಕರನ್ನು ಹಿಂದೆಕರೆಸಿಕೊಂಡಿದೆ. ಆದರೆ, ಪಾಕಿಸ್ತಾನ ಮಾತ್ರ ಈ ವಿಷಯದಲ್ಲಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದು, ಕರೋನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಇಲ್ಲದ ಕಾರಣ ಪಾಕಿಸ್ತಾನದ ವಿದ್ಯಾರ್ಥಿಗಳು ವುಹಾನ್‌ನಲ್ಲಿ ಉಳಿಯುವಂತೆ ಸೂಚಿಸಿದೆ
ಇಮ್ರಾನ್ ಸರ್ಕಾರದ ನಿರ್ಧಾರದಿಂದ ವುಹಾನ್ ನಲ್ಲಿರುವ ಪಾಕ್ ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಈ ನಿರ್ಧಾರದಿಂದ ಪಾಕಿಸ್ತಾನ ವಿಶ್ವದಾದ್ಯಂತ ತೀವ್ರ ಟೀಕೆಗೊಳಗಾಗಿದೆ. ಆದರೆ, ಸಂಕಷ್ಟದಲ್ಲಿರುವ ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ರಕ್ಷಿಸುವ ಭಾರತದ ಪ್ರಸ್ತಾಪಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ