ಐದು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಬಂದಿಳಿದ ಶ್ರೀಲಂಕಾ ಪ್ರಧಾನಿ ರಾಜಪಕ್ಸೆ

ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಐದು ದಿನಗಳ ಭಾರತ ಭೇಟಿಗೆ ಶುಕ್ರವಾರ  ಇಲ್ಲಿಗೆ ಆಗಮಿಸಿದರು
ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ
ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ

ನವದೆಹಲಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಐದು ದಿನಗಳ ಭಾರತ ಭೇಟಿಗೆ ಶುಕ್ರವಾರ  ಇಲ್ಲಿಗೆ ಆಗಮಿಸಿದರು

ಕಳೆದ ವರ್ಷ ನವೆಂಬರ್ ನಲ್ಲಿ ಅವರು ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶ ಪ್ರವಾಸವಾಗಿದ್ದು, ರಾಜಪಕ್ಸೆ ಅವರೊಂದಿಗೆ 10 ಸದಸ್ಯರ ನಿಯೋಗವೂ ಆಗಮಿಸಿದೆ.

ಭೇಟಿಯ ವೇಳೆ  ರಾಜಪಕ್ಸೆ ಅವರು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿದೇಶಾಂಗ ಸಚಿವ  ಎಸ್ ಜೈಶಂಕರ್ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ಮಾತುಕತೆ ರಾಜಕೀಯ, ವ್ಯಾಪಾರ, ಅಭಿವೃದ್ಧಿ, ರಕ್ಷಣಾ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ.

ಈ  ಭೇಟಿಯೊಂದಿಗೆ ಸಹಕಾರದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ನಮ್ಮ ರಾಷ್ಟ್ರಗಳ ನಡುವೆ  ಈಗಾಗಲೇ ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ ಎಂದು  ರಾಜಪಕ್ಸೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ
ಉಭಯ ದೇಶಗಳ ನಿಯೋಗಗಳು  ಇಂಡೋ-ಶ್ರೀಲಂಕಾ ವಾರ್ಷಿಕ ಭದ್ರತಾ ಸಂವಾದ ಮತ್ತು ಭಾರತ, ಶ್ರೀಲಂಕಾ, ಮಾಲ್ಡೀವ್ಸ್  ತ್ರಿಪಕ್ಷೀಯ ಕಡಲ ಭದ್ರತಾ ಒಪ್ಪಂದದ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ

ದೆಹಲಿಯ ಅಧಿಕೃತ ಮಾತುಕತೆಯ ನಂತರ, ಶ್ರೀಲಂಕಾದ ಪ್ರಧಾನಿ ಭಾನುವಾರ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಸಾರನಾಥ ಬೌದ್ಧ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಅವರು ಕೊಲಂಬೊಗೆ ತೆರಳುವ ಮೊದಲು ಸೋಮವಾರ ಬೋಧಗಯಾ ಮತ್ತು ತಿರುಪತಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com