
ಮೆಲ್ಬೋರ್ನ್: ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು.
ಬುಷ್ ಫೈರ್ ಕ್ರಿಕೆಟ್ ಬ್ಯಾಷ್ ನಲ್ಲಿ ಆಸ್ಟ್ರೇಲ್ಪಿಯಾ ಮಹಿಳಾ ಕ್ರಿಕೆಟರ್ ಗಳನ್ನು ಎದುರಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಮೊದಲ ಎಸೆತದಲ್ಲೇ ಚೆಂಡನ್ನು ಬೌಂಡರಿಗೆ ಅಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಈ ವಿಡಿಯೋ ವೈರಲ್ ಆಗತೊಡಗಿದೆ.
ಆಸ್ಟ್ರೇಲಿಯಾದಲ್ಲಿ ಬುಷ್ ಫೈರ್ ಸಂತ್ರಸ್ತರ ನೆರವಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಚ್ಯಾರಿಟಿ ಪಂದ್ಯವನ್ನು ಆಯೋಜಿಸಿದ್ದು ಮೆಲ್ಬೋರ್ನ್ ನಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದರು.
Advertisement