ಗಿರಿರಾಜ್ ಸಿಂಗ್ ಮಾಲಾರ್ಪಣೆ ಮಾಡಿದ ಬಳಿಕ ಗಂಗಾಜಲದಿಂದ ಅಂಬೇಡ್ಕರ್‌ ಪ್ರತಿಮೆ ಶುದ್ಧಗೊಳಿಸಿದ ಸಿಪಿಐ, ಆರ್ ಜೆಡಿ ಕಾರ್ಯಕರ್ತರು

ಕೇಂದ್ರ ಸಚಿವ ಹಾಗೂ ಬಿಜೆಪಿ ಸ್ಥಳೀಯ ಸಂಸದ ಗಿರಿರಾಜ್ ಸಿಂಗ್ ಅವರು ಡಾ.ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಸಿಪಿಐ ಮತ್ತು ಆರ್ ಜೆಡಿ ಕಾರ್ಯಕರ್ತರು ಪ್ರತಿಮೆಯನ್ನು ಗಂಗಾಜಲದಿಂದ ಶುದ್ಧಗೊಳಿಸಿದ್ದಾರೆ.
ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್
Updated on

ಬೇಗುಸರಾಯಿ: ಕೇಂದ್ರ ಸಚಿವ ಹಾಗೂ ಬಿಜೆಪಿ ಸ್ಥಳೀಯ ಸಂಸದ ಗಿರಿರಾಜ್ ಸಿಂಗ್ ಅವರು ಡಾ.ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಸಿಪಿಐ ಮತ್ತು ಆರ್ ಜೆಡಿ ಕಾರ್ಯಕರ್ತರು ಪ್ರತಿಮೆಯನ್ನು ಗಂಗಾಜಲದಿಂದ ಶುದ್ಧಗೊಳಿಸಿದ್ದಾರೆ.

ಗಿರಿರಾಜ್ ಸಿಂಗ್ ಅವರು ಬೇಗುಸರಾಯಿ ಜಿಲ್ಲೆಯ ಬಲ್ಲಿಯಾ ಬ್ಲಾಕ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್ಯಾಲಿ ಉದ್ದೇಶಿಸಿ ಮಾತನಾಡುವ ಮುನ್ನ ಇಲ್ಲಿನ ಪಾರ್ಕ್ ವೊಂದರಲ್ಲಿದ್ದ ಸಂವಿಧಾನ ಶಿಲ್ಪಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.

ನಂತರ ಈ ಪಾರ್ಕ್ ಸಮೀಪದಲ್ಲಿಯೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ಸಿಪಿಐ ನಾಯಕರಾದ ಸನೋಜ್ ಸರೋಜ್, ಆರ್ ಜೆಡಿ ನಾಯಕರಾದ ವಿಕಾಸ್ ಪಾಸ್ವಾನ್, ರೂಪ್ ನಾರಾಯಣ ಪಾಸ್ವಾನ್ ಮತ್ತು ಇತರೆ ಕಾರ್ಯಕರ್ತರು ಕೇಂದ್ರ ಸಚಿವರ ಮಾಲಾರ್ಪಣೆಯಿಂದ ಅಂಬೇಡ್ಕರ್ ಪ್ರತಿಮೆ ಮೈಲಿಗೆಯಾಗಿದೆ ಎಂದು ಆರೋಪಿಸಿ, ಗಂಗಾನದಿಯಿಂದ ಒಂದು ಬಕೇಟ್ ನೀರುತಂದು ಪ್ರತಿಮೆ ಶುದ್ಧಗೊಳಿಸಿದ್ದಾರೆ. ಅಲ್ಲದೆ ಗಂಗಾಜಲದಿಂದ ಪ್ರತಿಮೆ ಶುದ್ಧಗೊಳಿಸುವುದನ್ನು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com