ಜಮ್ಮು-ಕಾಶ್ಮೀರ:ಷಾ ಫಾಸಲ್ ವಿರುದ್ಧ ಪಿಎಸ್ಎ ಪ್ರಕರಣ ದಾಖಲು, ಬಂಧನ

ಮಾಜಿ ನಾಗರಿಕ ಸೇವೆ ಅಧಿಕಾರಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ (ಜೆಕೆಪಿಎಂ) ಮುಖ್ಯಸ್ಥ ಶಾ ಫಾಸಲ್ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಕೇಸು ದಾಖಲಾಗಿದೆ. 
ಶಾ ಫಾಸಲ್
ಶಾ ಫಾಸಲ್
Updated on

ಜಮ್ಮು-ಕಾಶ್ಮೀರ: ಐಎಎಸ್ ಅಧಿಕಾರಿಯಾಗಿ ನಂತರ ರಾಜಕಾರಣಿಯಾಗಿ ಬದಲಾದ ಮತ್ತು ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ಮುಖ್ಯಸ್ಥ ಶಾ ಫಾಸಲ್ ವಿರುದ್ಧ ಶನಿವಾರ ಕಾಶ್ಮೀರ ಕಣಿವೆಯಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಾಜಿ ಅಧಿಕಾರಿಯು ಆಗಸ್ಟ್ ಎರಡನೇ ವಾರದಲ್ಲಿ ವಿದೇಶಕ್ಕೆ ತೆರಳುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟಿದ್ದಾರೆ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ, ಕಾಶ್ಮೀರದ ರಾಜಕೀಯ ಮುಖಂಡರಿಗೆ ಈಗ ಕೇವಲ ಎರಡು ಆಯ್ಕೆಗಳಿವೆ-ಮೊದಲನೆಯದು ಸರ್ಕಾರ ಪರವಾಗಿ ನಿಲ್ಲುವುದು ಇಲ್ಲ ಪ್ರತ್ಯೇಕತಾವಾದಿಗಳನ್ನು ಸೇರಿಕೊಳ್ಳುವುದು ಆದರೆ, ಪ್ರತ್ಯೇಕತಾವಾದಿಗಳನ್ನೂ ನೀವು ಸೇರಲು ಬಯಸುವಿರಾ? ಎಂದು ಕೇಳಿದಾಗ ಅವರು ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ .

ನಂತರ ಅವರನ್ನು ಮತ್ತೆ ಶ್ರೀನಗರಕ್ಕೆ ಕಳುಹಿಸಿ ಅಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆಗಸ್ಟ್ 5 ರಿಂದ ಕಣಿವೆಯಲ್ಲಿ ಪಿಎಸ್ಎ ಅಡಿಯಲ್ಲಿ ಪ್ರತ್ಯೇಕ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ಪ್ರತ್ಯೇಕ ರಾಜಕೀಯ ಪಕ್ಷಗಳ 300 ಕ್ಕೂ ಹೆಚ್ಚು ನಾಯಕರನ್ನು ಬಂಧಿಸಲಾಗಿದೆ, ಕೇಂದ್ರವು 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸಿ ಜೊತೆಗೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿದೆ. 

ಆದರೂ ಮಾಜಿ ಮಂತ್ರಿಗಳು ಮತ್ತು ಶಾಸಕರು ಸೇರಿದಂತೆ 30 ಕ್ಕೂ ಹೆಚ್ಚು ನಾಯಕರು ಬಿಡುಗಡೆಯಾದ ನಂತರ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವಿಷಯವನ್ನು ಮತ್ತೆ ಪ್ರಸ್ತಾಪ ಮಾಡುವುದಿಲ್ಲ ಎಂದೂ ಲಿಖಿತವಾಗಿ ಮುಚ್ಚಳಿಕೆ ಕೊಟ್ಟ ನಂತರ ಬಿಡುಗಡೆ ಮಾಡಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com