ಶಾಹೀನ್ ಬಾಗ್ ಬಿಟ್ಟು ತೆರಳುವಂತೆ ಮಾಧ್ಯಮಗಳಿಗೆ ಸುಪ್ರೀಂ ನೇಮಿತ ಮಧ್ಯಸ್ಥಿಕೆದಾರರ ಮನವಿ

ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಮಧ್ಯಸ್ಥಿಕೆದಾರರು ಬುಧವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾತುಕತೆಗೆ ಅಡ್ಡಿಪಡಿಸಿದ ಮಾಧ್ಯಮಗಳಿಗೆ ಶಾಹೀನ್ ಬಾಗ್ ಬಿಟ್ಟು ತೆರಳುವಂತೆ ಮನವಿ ಮಾಡಿದ್ದಾರೆ.
ಮಧ್ಯಸ್ಥಿಕೆದಾರರು
ಮಧ್ಯಸ್ಥಿಕೆದಾರರು

ನವದೆಹಲಿ: ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಮಧ್ಯಸ್ಥಿಕೆದಾರರು ಬುಧವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಾತುಕತೆಗೆ ಅಡ್ಡಿಪಡಿಸಿದ ಮಾಧ್ಯಮಗಳಿಗೆ ಶಾಹೀನ್ ಬಾಗ್ ಬಿಟ್ಟು ತೆರಳುವಂತೆ ಮನವಿ ಮಾಡಿದ್ದಾರೆ.

ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಬೇರೆಕಡೆ ಸ್ಥಳಾಂತರಿಸುವುದಕ್ಕಾಗಿ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿದೆ. ಈ ಇಬ್ಬರು ವಕೀಲರು ಇಂದು ಶಾಹೀನ್ ಬಾಗ್ ಗೆ ಭೇಟಿ ನೀಡಿ ಪ್ರತಿಭಟನಾ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಮನವಿ ಮಾಡಿದರು.

ಪ್ರತಿಭಟನೆ ಮಾಡುವ ಹಕ್ಕು ನಿಮಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅದೇ ರೀತಿ ಬೇರೆಯವರಿಗೂ ಈ ರಸ್ತೆ ಬಳಸುವ ಮತ್ತು ಇಲ್ಲಿನ ಅಂಗಡಿಗಳನ್ನು ತೆರೆಯುವ ಹಕ್ಕು ಇದೆ. ಹೀಗಾಗಿ ಪ್ರತಿಭಟನಾ ಸ್ಥಳವನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಭಟನಾಕಾರರು ನಿರಾಕರಿಸಿದರು.

ಈ ವೇಳೆ ಮಾತನಾಡಿದ ಮಧ್ಯಸ್ಥಿಕೆದಾರರು, ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಕೇಳಲು ನಾವು ಇಲ್ಲಿಗೆ ಬಂದಿಲ್ಲ. ಪ್ರತಿಭಟನಾ ಸ್ಥಳವನ್ನು ಬೇರೆಕಡೆ ಸ್ಥಳಾಂತರಿಸಿ ಎಂದು ಸಲಹೆ ನೀಡಿದ್ದೇವೆ. ಮಾಧ್ಯಮಗಳು ಚಿತ್ರೀಕರಿಸುವುದನ್ನು ನಿಲ್ಲಿಸಬೇಕು ಮತ್ತು ಸ್ಥಳದಿಂದ ತೆರಳುವ ಮೂಲಕ ಮಾತುಕತೆಗೆ ಅವಕಾಶ ನೀಡಬೇಕು. ನಾವು ಯಶಸ್ವಿಯಾಗಿ ಮಾತುಕತೆ ನಡೆಸಲು ಸ್ವಲ್ಪ ಖಾಸಗಿತನ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ 67 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅವರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com