ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ಏಕೈಕ ಸ್ಪರ್ಧಿ: ಕಾಂಗ್ರೆಸ್ 

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದಿನ ಏಪ್ರಿಲ್ ನಲ್ಲಿ ರಾಹುಲ್ ಗಾಂಧಿಯವರು ಮತ್ತೆ ಮರಳುವ ಸಾಧ್ಯತೆ ಹೆಚ್ಚಿರುವಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ನೇಮಕಕ್ಕೆ ಚುನಾವಣೆ ನಡೆಸಿ ಆಯ್ಕೆ ಮಾಡಬೇಕು ಎಂಬ ಬೇಡಿಕೆ ಪಕ್ಷದಲ್ಲಿ ಹೆಚ್ಚಾಗುತ್ತಿದೆ.
ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ಏಕೈಕ ಸ್ಪರ್ಧಿ: ಕಾಂಗ್ರೆಸ್ 
Updated on

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದಿನ ಏಪ್ರಿಲ್ ನಲ್ಲಿ ರಾಹುಲ್ ಗಾಂಧಿಯವರು ಮತ್ತೆ ಮರಳುವ ಸಾಧ್ಯತೆ ಹೆಚ್ಚಿರುವಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ನೇಮಕಕ್ಕೆ ಚುನಾವಣೆ ನಡೆಸಿ ಆಯ್ಕೆ ಮಾಡಬೇಕು ಎಂಬ ಬೇಡಿಕೆ ಪಕ್ಷದ ಮುಖಂಡರಿಂದ ಕೇಳಿಬರುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಆಂತರಿಕ ಚುನಾವಣೆ ನಡೆಸಬೇಕೆಂದು ಹಲವು ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ನಂತರ ಕಳೆದ ಆಗಸ್ಟ್ ನಲ್ಲಿ ಸೋನಿಯಾ ಗಾಂಧಿಯವರು ಪಕ್ಷದ ಮಧ್ಯಂತರ ಅಧ್ಯಕ್ಷೆಯಾದ ನಂತರ ಈ ವಿಷಯ ಅಲ್ಲಿಗೆ ತಣ್ಣಗಾಯಿತು.

ಸೋನಿಯಾ ಗಾಂಧಿ ಅವರಿಂದ ಅಧ್ಯಕ್ಷ ಸ್ಥಾನವನ್ನು ಮತ್ತೆ ರಾಹುಲ್ ಗಾಂಧಿಯವರಿಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆಗಳು ನಡೆಯುತ್ತಿರುವಾಗ ಕಳೆದ ದೆಹಲಿ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಹಲವು ಹಿರಿಯ ನಾಯಕರು ತಮ್ಮ ಅಭಿಪ್ರಾಯವನ್ನು ಹೊರಹಾಕಲು ಶುರು ಮಾಡಿದ್ದಾರೆ. ಪಕ್ಷ ಸದ್ಯ ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದರೆ ನಾಯಕತ್ವ ಮತ್ತು ಹೊಸ ಅಧ್ಯಕ್ಷರನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿರುವುದು ಎಂದು ಮಾಜಿ ಸಿಎಂ ದಿವಂಗತ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಸಂದೀಪ್ ದೀಕ್ಷಿತ್ ಅವರು ಭಾಷಣ ಮಾಡುವುದು, ಪುಕ್ಕಟೆ ಸಲಹೆ ಕೊಡುವುದು, ಉಪನ್ಯಾಸ ಮಾಡುವುದು ಬಿಟ್ಟು ದೆಹಲಿಯಲ್ಲಿ ಉತ್ತಮ ಕೆಲಸ ಮಾಡುವುದರತ್ತ ಗಮನ ಹರಿಸಲಿ ಎಂದು ಪಕ್ಷದ ವಕ್ತಾರ ಆರ್ ಎಸ್ ಸುರ್ಜೆವಾಲಾ ಹೇಳಿದ್ದಾರೆ.


ಆದರೆ ಸಂದೀಪ್ ದೀಕ್ಷಿತ್ ಮಾತಿಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಿಸಿದ್ದಾರೆ. ಸಂದೀಪ್ ದೀಕ್ಷಿತ್ ಅವರು ಬಹಿರಂಗವಾಗಿ ಹೇಳಿರುವುದನ್ನು ಪಕ್ಷದಲ್ಲಿ ಸಾವಿರಾರು ನಾಯಕರು ಖಾಸಗಿಯಾಗಿ ಮಾತನಾಡಿಕೊಳ್ಳುತ್ತಾರೆ, ಪಕ್ಷದಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಲು ಮತ್ತು ದೇಶದ ಮತದಾರರಲ್ಲಿ ಕಾಂಗ್ರೆಸ್ ಪರ ಮತ ಹಾಕುವಂತೆ ಉತ್ತೇಜಿಸಲು ನಾಯಕತ್ವ ಚುನಾವಣೆಗಳನ್ನು ನಡೆಸಬೇಕೆಂದು ನಾನು ಮತ್ತೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. 


ಈ ಬಗ್ಗೆ ಸುರ್ಜೆವಾಲಾ ಅವರನ್ನು ಕೇಳಿದರೆ, ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ. ಈ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ ಸಮಿತಿಯ ನಿರ್ಣಯಗಳನ್ನು ಓದಲಿ, ಅವರ ಜ್ಞಾನ ಹೆಚ್ಚುತ್ತದೆ, ಅದು ಬಿಟ್ಟು ಸಾರ್ವಜನಿಕವಾಗಿ ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com