ನಿಮ್ಮ ವಾಕ್ ಸ್ವಾತಂತ್ರ ಭಾರತದ ವ್ಯಕ್ತಿತ್ವಕ್ಕೆ ಹಾನಿ ಮಾಡಬಾರದು: ರವಿಶಂಕರ್ ಪ್ರಸಾದ್

ಭಯೋತ್ಪಾದಕರು ಹಾಗೂ ಭ್ರಷ್ಟರೈಗೆ ಯಾವುದೇ ಬಗೆಯ "ಗೌಪ್ಯತೆಯ ಹಕ್ಕಿಲ್ಲ" ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಶನಿವಾರ ಹೇಳಿದ್ದಾರೆ.
ರವಿಶಂಕರ್ ಪ್ರಸಾದ್
ರವಿಶಂಕರ್ ಪ್ರಸಾದ್
Updated on

ಭಯೋತ್ಪಾದಕರು ಹಾಗೂ ಭ್ರಷ್ಟರೈಗೆ ಯಾವುದೇ ಬಗೆಯ "ಗೌಪ್ಯತೆಯ ಹಕ್ಕಿಲ್ಲ" ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಶನಿವಾರ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ 2020, 'ನ್ಯಾಯಾಂಗ ಮತ್ತು ಬದಲಾಗುತ್ತಿರುವ ಜಗತ್ತು'  ಎಂಬ ವಿಚಾರಸಂಕೀರ್ಣದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ತಾಣಗಳ ಮೂಲಕ ನ್ಯಾಯಾಂಗದ ಮೇಲೆ ಜನಸಾಮಾನ್ಯರ ಒತ್ತಡವು "ಅಪಾಯಕಾರಿ ಪ್ರವೃತ್ತಿ" ಎಂದು ಸಚಿವರು ಹೇಳಿದರು. ಕೆಲವರು ಯಾವ ರೀತಿಯ ತೀರ್ಪನ್ನು ನ್ಯಾಯಾಲಯಗಳು ನೀಡಬೇಕೆಂದು  ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡು ಪ್ರಚಾರ ಮಾಡುತ್ತಾರೆ. ಒಂದೊಮ್ಮೆ ನ್ಯಾಯಾಧೀಶರು ನಿರೀಕ್ಷಿಸಿದ ತೀರ್ಪು ನೀಡದೆ ಹೋದಲ್ಲಿ ಟೀಕೆಗಳು ಆರಂಭವಾಗುತ್ತದೆ.ಇದು ಅಪಾಯಕರ ಎಂದು ಸಚಿವರು ಹೇಳಿದ್ದಾರೆ.

"ಪ್ರಜಾಪ್ರಭುತ್ವದಲ್ಲಿ ನಾವು ಭಿನ್ನಾಭಿಪ್ರಾಯವನ್ನು ಸ್ವಾಗತಿಸುತ್ತೇವೆ, ನಾವು ಜನಪ್ರಿಯತೆಯನ್ನು ಸ್ವಾಗತಿಸುತ್ತೇವೆ ಆದರೆ ಅದೇ ಜನಪ್ರಿಯತೆ ಸಂವಿಧಾನದ ಹಕ್ಕುಗಳಿಗೆ ಅಡ್ಡಿಯಾಗಬಾರದು"

ಭಾಷಣ ಮತ್ತು ಅಭಿವ್ಯಕ್ತಿ ಹಕ್ಕು ಹಾಗೂ ಮೂಲಭೂತ ಹಕ್ಕುಗಳ ಬಗೆಗೆ ಮಾತನಾಡಿದ ರವಿಶಂಕರ್ ಪ್ರಸಾದ್ "ನಿಮ್ಮ ಮನಸ್ಸನ್ನು ತೆರೆದು ಮಾತನಾಡಿ. ಪ್ರಶ್ನೆಗಳನ್ನು ಕೇಳಿ. ಆದರೆ ಭಾರತದ ಐಕ್ಯತೆಯ ಹೆಗ್ಗುರುತನ್ನು ಹಾಗೆಯೇ ಇರಿಸಿಕೊಳ್ಳಬೇಕಿದೆ." ಎಂದರು.

ಜಾಗತಿಕ ಸವಾಲುಗಳ ಬಗ್ಗೆ ಮಾತನಾಡುತ್ತಾ, "ನಾವು ಹೇಗೆ ನಿರ್ಣಯವನ್ನು ಹುಡುಕುತ್ತೇವೆ? ಇದು ಒಂದು ಪ್ರಮುಖ ಪ್ರಶ್ನೆಕಾನೂನಿನ ನಿಯಮದಿಂದ ಆಡಳಿತ ನಡೆಸುವ ಸಾಂಪ್ರದಾಯಿಕ ನಿಯಂತ್ರಕ ಕಾರ್ಯವಿಧಾನವು ಒಂದೇ ಇದಕ್ಕೆಲ್ಲಾ ಉತ್ತರ ಎಂದು ನಾನು ಭಾವಿಸುತ್ತೇನೆ" ಅವರು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com