ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಟ್ರಂಪ್ ದಂಪತಿ ಭಾಗಿ
ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಟ್ರಂಪ್ ದಂಪತಿ ಭಾಗಿ

ರಾಷ್ಟ್ರಪತಿ ಭವನದ ಔತಣಕೂಟದಲ್ಲಿ ಟ್ರಂಪ್ ದಂಪತಿ ಭಾಗಿ: ಪ್ರಧಾನಿ, ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರ ಭೇಟಿ 

ಭಾರತ ಪ್ರವಾಸ ಕಾರ್ಯಕ್ರಮದ ಕೊನೆಯ ಭಾಗದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಔತಣ ಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
Published on

ನವದೆಹಲಿ: ಭಾರತ ಪ್ರವಾಸ ಕಾರ್ಯಕ್ರಮದ ಕೊನೆಯ ಭಾಗದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಔತಣ ಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ರಾಷ್ಟ್ರಪತಿ ಕೋವಿಂದ್ ದಂಪತಿ ಟ್ರಂಪ್ ದಂಪತಿಯನ್ನು ರಾಷ್ಟ್ರಪತಿ ಭವನದಲ್ಲಿ ಸ್ವಾಗತಿಸಿದರು. ಮಾತುಕತೆ ಬಳಿಕ ಟ್ರಂಪ್ ದಂಪತಿ ರಾಷ್ಟ್ರಪತಿ ಭವನದಲ್ಲಿ ನೆರೆದಿರುವ ಆಹ್ವಾನಿತ ಗಣ್ಯರನ್ನು ಭೇಟಿ ಮಾಡಿದ್ದಾರೆ. 

90-100 ಅತಿಥಿಗಳು ಔತಣಕೂಟದಲ್ಲಿ ಭಾಗಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಿಜೆಐ ಅರವಿಂದ್ ಬೊಬ್ಡೆ, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಕರ್ನಾಟಕ ಸಿಎಂ ಯಡಿಯೂರಪ್ಪ, ತೆಲಂಗಾಣ ಸಿಎಂ ಕೆಸಿಆರ್ ತಮಿಳುನಾಡಿನ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. 

ಔತಣ ಕೂಟ ಮುಕ್ತಾಯಗೊಂಡ ಬಳಿಕ ಟ್ರಂಪ್ ತಂಡ ರಾತ್ರಿ 10:30 ರ ವೇಳೆಗೆ ಅಮೆರಿಕಾಗೆ ವಾಪಸ್ಸಾಗಲಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com