ಪ್ರಧಾನಿ ಮೋದಿಯವರ 'ಪರೀಕ್ಷಾ ಪೆ ಚರ್ಚಾ'ಕಾರ್ಯಕ್ರಮ ಜ.16ರ ಬದಲು ಜ.20ಕ್ಕೆ 

ಪರೀಕ್ಷೆ ಸಮಯದಲ್ಲಿ ಮಕ್ಕಳು ಒತ್ತಡ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮ ಜನವರಿ 16ರ ಬದಲಿಗೆ ಜನವರಿ 20ಕ್ಕೆ ಮರು ನಿಗದಿಯಾಗಿದೆ. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಪರೀಕ್ಷೆ ಸಮಯದಲ್ಲಿ ಮಕ್ಕಳು ಒತ್ತಡ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮ ಜನವರಿ 16ರ ಬದಲಿಗೆ ಜನವರಿ 20ಕ್ಕೆ ಮರು ನಿಗದಿಯಾಗಿದೆ. 


ಪ್ರಧಾನಿ ಮೋದಿಯವರ ಸಂವಹನ ಕಾರ್ಯಕ್ರಮವಾದ ಪರೀಕ್ಷಾ ಪೆ ಚರ್ಚಾ 2020 ಕಾರ್ಯಕ್ರಮ ಜನವರಿ 20ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಜನವರಿ 16ರಂದು ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ 20ಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 


ಮಕ್ಕಳಿಗೆ ಪರೀಕ್ಷೆ ಹತ್ತಿರವಾಗುತ್ತಿದ್ದು, ಈ ಸಂದರ್ಭದಲ್ಲಿ ಪರೀಕ್ಷಾ ಪೆ ಚರ್ಚಾ ನಡೆಸಿಕೊಡುತ್ತೇನೆ, ಒತ್ತಡರಹಿತ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಲು ನಾವೆಲ್ಲರೂ ಜೊತೆಯಾಗಿ ಕೆಲಸ ಮಾಡೋಣ. 9ರಿಂದ 12 ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಇರುವ ಸ್ಪರ್ಧೆಯಿದು. ಇದರಲ್ಲಿ ಜಯಶಾಲಿಯಾದವರಿಗೆ ಪಿಪಿಸಿ ಪರೀಕ್ಷೆಗೆ ಕೂರಿಸಲಾಗುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com