ಅಮೃತಸರ್: ಶಿರೋಮಣಿ ಅಕಾಲಿ ದಳ ಮುಖಂಡನ ಗುಂಡಿಕ್ಕಿ ಹತ್ಯೆ
ಅಮೃತಸರ್: ಗುರುದ್ವಾರದಲ್ಲಿ ಪ್ರಾರ್ಥನೆ ಮುಗಿಸಿ ಹಿಂತಿರುಗಿತ್ತಿದ್ದ ಸ್ಥಳೀಯ ಶಿರೋಮಣಿ ಅಕಾಲಿ ದಳದ ಮುಖಂಡರೊಬ್ಬರ ಮೇಲೆ ಮೋಟಾರ್ ಸೈಕಲ್ ಮೇಲೆ ಬಂದ ಮೂವರು ಹಲ್ಲೆಕೋರರು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬಿನ ಅಮೃತಸರ್ ನ ಉಮರ್ಪುರ ಗ್ರಾಮದಲ್ಲಿನಡೆದಿದೆ.
ಗ್ರಾಮದ ಮುಖ್ಯಸ್ಥೆಯಾಗಿದ್ದ ಮಹಿಳೆಯ ಪತಿ ಗುರುದೀಪ್ ಸಿಂಗ್ ಅವ್ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಹಲ್ಲೆಕೋರರು ಒಟ್ಟು ಐದು ಗುಂಡುಗಳನ್ನು ಸಿಂಗ್ ಮೇಲೆ ಪ್ರಯೋಗಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೋಲೀಸರು ವಿವರಿಸಿದರು.
ಸಿಂಗ್ ಅಕಾಲಿ ದಳದ ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಜಿತಿಯಾ ಅವರ ನಿಕಟವರ್ತಿ ಎಂದು ಹೇಳಲಾಗಿದೆ.
ಇನ್ನು ಸಿಂಗ್ ಹತ್ಯೆಗೆ ಸಂಬಂಧಿಸಿ ತಂದೆ-ಮಕ್ಕಳಾದ ನಿರ್ಮಲ್ ಸಿಂಗ್ ಮತ್ತು ಹರ್ಮನ್‌ಜೀತ್ ಸಿಂಗ್ ಸೇರಿದಂತೆ ಐದು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಹರ್ಮನ್‌ಜೀತ್‌ಹೆಸರು ತಗುಲಿಕೊಂಡಿದೆ ಎಂದು ಪೋಲೀಸರು ಮಾಹಿತಿ ಒದಗಿಸಿದ್ದಾರೆ.
ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಗುರುದಾಸ್‌ಪುರದ ಪಕ್ಷದ ದಲ್‌ಬೀರ್ ಸಿಂಗ್ ಧಿಲ್ವಾನ್ ಹತ್ಯೆಯಾದ ನಂತರ ರಾಜ್ಯದ ಎಸ್‌ಎಡಿ ಕಾರ್ಯಕರ್ತರ ಮೇಲೆ ಇದು ಎರಡನೇ ಮಾರಣಾಂತಿಕ ದಾಳಿಯಾಗಿದೆ. ದಿಲ್ವಾನ್ ಹತ್ಯೆಯನ್ನು "ರಾಜಕೀಯ ಕೊಲೆ" ಎಂದು ಎಸ್ಎಡಿ ಬಣ್ಣಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ