ಪೌರತ್ವ ಕಾಯ್ದೆ ವಿರೋಧಿ ನಿಲುವಿನಿಂದಾಗಿ ಸರ್ಕಾರ ನಮ್ಮ ಸ್ತಬ್ಧಚಿತ್ರ ಪ್ರಸ್ತಾವನೆ ತಿರಸ್ಕರಿಸಿದೆ: ಟಿಎಂಸಿ ಆರೋಪ 

ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲು ಸಲ್ಲಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಟಿಎಂಸಿ ಪ್ರತಿಭಟನೆ ನಡೆಸುತ್ತಿರುವುದು ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ. 
ಪೌರತ್ವ ಕಾಯ್ದೆ ವಿರೋಧಿ ನಿಲುವಿನಿಂದಾಗಿ ಸರ್ಕಾರ ನಮ್ಮ ಸ್ತಬ್ಧಚಿತ್ರ ಪ್ರಸ್ತಾವನೆ ತಿರಸ್ಕರಿಸಿದೆ: ಟಿಎಂಸಿ ಆರೋಪ 

ಕೋಲ್ಕತ್ತಾ: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲು ಸಲ್ಲಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಲು ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಟಿಎಂಸಿ ಪ್ರತಿಭಟನೆ ನಡೆಸುತ್ತಿರುವುದು ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.


ಸಿಎಎ ವಿರುದ್ಧ ಪ್ರತಿಭಟನೆ ಮಾಡಿದ ಒಂದೇ ಕಾರಣಕ್ಕೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ವಿರುದ್ಧ ಮಲತಾಯಿ ಧೋರಣೆ ತಳೆಯುತ್ತಿರುವುದು ಸರಿಯಲ್ಲ. ಜನ ವಿರೋಧಿ ಕಾಯ್ದೆಯಾದ ಸಿಎಎಯನ್ನು ವಿರೋಧಿಸುತ್ತಿರುವುದರಿಂದ ಕೇಂದ್ರ ನಮ್ಮ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಸಂಸದೀಯ ವ್ಯವಹಾರಗಳ ಸಚಿವ ತಪಸ್ ರಾಯ್ ಆರೋಪಿಸಿದ್ದಾರೆ.


ಪಶ್ಚಿಮ ಬಂಗಾಳದ ಸ್ತಬ್ಧಚಿತ್ರ ಪ್ರಸ್ತಾವನೆ ತಿರಸ್ಕಾರವಾಗುವುದು ಇದೇ ಮೊದಲ ಸಲವಲ್ಲ. ಹಿಂದಿನ ಉದಾಹರಣೆಗಳು ಸಾಕಷ್ಟಿವೆ. ಇಂತಹ ಕ್ಷುಲ್ಲಕ ರಾಜಕಾರಣ ನಮ್ಮನ್ನು ದೃತಿಗೆಡಿಸುವುದಿಲ್ಲ. ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳ ಜನರಿಗೆ ಅವಮಾನಿಸಿದೆ, ಸದ್ಯದಲ್ಲಿಯೇ ಇದಕ್ಕೆ ಸರಿಯಾದ ಉತ್ತರ ಸಿಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com