ಕಾಮನ್ ವೆಲ್ತ್ ಸ್ಪೀಕರ್ ಗಳ ಸಮಾವೇಶ: ಭಾರತೀಯ ಸಂಸದೀಯ ನಿಯೋಗಕ್ಕೆ ಸ್ಪೀಕರ್ ಓಂ ಬಿರ್ಲಾ ನೇತೃತ್ವ

ಕೆನಡಾದ ಒಟ್ಟಾವದಲ್ಲಿ ನಡೆಯುವ ಕಾಮನ್ ವೆಲ್ತ್ ದೇಶಗಳ 25ನೇ ಸ್ಪೀಕರ್ ಗಳ ಸಮಾವೇಶ(ಸಿಎಸ್ ಪಿಒಸಿ)ದಲ್ಲಿ ಪಾಲ್ಗೊಳ್ಳಲು ರಾಜ್ಯಸಭೆ ಉಪಸಭಾಪತಿ ಹರಿವಂಶ್ ಅವರನ್ನೊಳಗೊಂಡ ಭಾರತದ ಸಂಸದೀಯ ನಿಯೋಗದ ನೇತೃತ್ವವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಹಿಸಲಿದ್ದಾರೆ.
ಸ್ಪೀಕರ್ ಓಂ ಬಿರ್ಲಾ
ಸ್ಪೀಕರ್ ಓಂ ಬಿರ್ಲಾ
Updated on

ನವದೆಹಲಿ: ಕೆನಡಾದ ಒಟ್ಟಾವದಲ್ಲಿ ನಡೆಯುವ ಕಾಮನ್ ವೆಲ್ತ್ ದೇಶಗಳ 25ನೇ ಸ್ಪೀಕರ್ ಗಳ ಸಮಾವೇಶ(ಸಿಎಸ್ ಪಿಒಸಿ)ದಲ್ಲಿ ಪಾಲ್ಗೊಳ್ಳಲು ರಾಜ್ಯಸಭೆ ಉಪಸಭಾಪತಿ ಹರಿವಂಶ್ ಅವರನ್ನೊಳಗೊಂಡ ಭಾರತದ ಸಂಸದೀಯ ನಿಯೋಗದ ನೇತೃತ್ವವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಹಿಸಲಿದ್ದಾರೆ.

ಇದೇ ಜ. 7ರಂದು ಮಂಗಳವಾರ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜ.11ರವರೆಗೆ ಸಮ್ಮೇಳನ ಮುಂದುವರೆಯಲಿದೆ. ಸಮ್ಮೇಳನದಲ್ಲಿ ನಾಲ್ಕು ಕಾರ್ಯಾಗಾರ ಅಧಿವೇಶನಗಳು ಮತ್ತು ಒಂದು ವಿಶೇಷ ಪೂರ್ಣಾಧಿವೇಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಸದೀಯ ಕಾರ್ಯಕಲಾಪಗಳು, ಪಾರದರ್ಶಕತೆ, ಸವಾಲುಗಳು ಮತ್ತು ಅವಕಾಶಗಳು, ವಿವಿಧ ದೇಶಗಳ ಅತ್ಯುತ್ತಮ ಸಂಸತ್ ಅಧಿವೇಶನಗಳು ಸೇರಿದಂತೆ ವಿವಿಧ ಸಂಸದೀಯ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ.

ಬದಲಾಗುತ್ತಿರುವ ಸಂಸತ್‍ನ ಚಿತ್ರಣ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಹೊಸದಾಗಿ ಹೊರಹೊಮ್ಮುತ್ತಿರುವ ನಡಾವಳಿಗಳು ಮತ್ತು ಕಾರ್ಯವಿಧಾನಗಳಲ್ಲಿ ಸ್ಪೀಕರ್ ಪಾತ್ರ ಕುರಿತು ವಿಶೇಷ ಪೂರ್ಣಾಧಿವೇಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಸದೀಯ ಸನ್ನಿವೇಶ ಮತ್ತು ಅದರ ಆಚೆ ವೈಯಕ್ತಿಕ ಭದ್ರತೆ ಕುರಿತ ವಿಷಯವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಾರ್ಯಾಗಾರದಲ್ಲಿ ಮಾತನಾಡಲಿದ್ದಾರೆ.

ಜ. 6ರಂದು ನಡೆಯುವ ಸಿಎಸ್ ಪಿಒಸಿ ಸ್ಥಾಯಿ ಸಮಿತಿಯ ಸಭೆಯಲ್ಲಿ ಓಂ ಬಿರ್ಲಾ ಪಾಲ್ಗೊಳ್ಳಲಿದ್ದಾರೆ.

ಕೆನಡಾ ಭೇಟಿಯ ವೇಳೆ ಓಂ ಬಿರ್ಲಾ ಅವರು ಅಲ್ಲಿನ ಸಂಸತ್ ಸ್ಪೀಕರ್ ಮತ್ತು ಇತರ ಗಣ್ಯರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.

ಭಾರತೀಯ ಸಂಸದೀಯ ನಿಯೋಗ ಒಟ್ಟಾವ ಮತ್ತು ಟೊರಂಟೋದಲ್ಲಿನ ಭಾರತೀಯ ಸಮುದಾಯಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com