ಜೆಎನ್ ಯುನಲ್ಲಿ ದಾಂಧಲೆ: ವಿದ್ಯಾರ್ಥಿಗಳನ್ನು ಎಡಪಂಥಿಯರೇ ಎಂದು ಕೇಳಿದ ಮುಸುಕುಧಾರಿಗಳು

ರಾಷ್ಟ್ರರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ  ಕಳೆದ ರಾತ್ರಿ ನಡೆದ ದಾಂಧಲೆ ವೇಳೆಯಲ್ಲಿ ಮುಸುಕುಧಾರಿ ಪುಂಡರು, ಸಬರಮತಿ ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳನ್ನು ನೀವು ಎಡಪಂಥಿಯರೇ ಎಂದು ಕೇಳಿದ್ದಾರೆ.
ಜೆಎನ್ ಯು  ವಿದ್ಯಾರ್ಥಿಗಳು
ಜೆಎನ್ ಯು ವಿದ್ಯಾರ್ಥಿಗಳು

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ  ಕಳೆದ ರಾತ್ರಿ ನಡೆದ ದಾಂಧಲೆ ವೇಳೆಯಲ್ಲಿ ಮುಸುಕುಧಾರಿ ಪುಂಡರು, ಸಬರಮತಿ ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿಗಳನ್ನು ನೀವು ಎಡಪಂಥಿಯರೇ ಎಂದು ಕೇಳಿದ್ದಾರೆ.

ಭಾನುವಾರ ಸಂಜೆ  6-30ರ ಸುಮಾರಿನಲ್ಲಿ ಕೈಯಲ್ಲಿ ದೊಣ್ಣೆ, ಕಬ್ಬಿಣದ ರಾಡು, ಕೆಲ ರಾಸಾಯನಿಕ ವಸ್ತುವಿದ್ದ ಗಾಜಿನ ಬಾಟಲಿ ಹಿಡಿದು ಹಾಸ್ಟೆಲ್ ನೊಳಗೆ ನುಗ್ಗಿದ  20 ಮುಸುಕುಧಾರಿ ದಾಳಿಕೋರರು, ನನ್ನನ್ನು ಎಡಪಂಥೀಯರೇ ಎಂದು ಪ್ರಶ್ನಿಸಿದರು, ನಾನು ಎಡಪಂಥೀಯನಾಗಿದ್ದರೂ ಇಲ್ಲ ಎಂದು ಹೇಳಿದ್ದಾಗಿ  ಸಬರಮತಿ ಪುರುಷರ ಹಾಸ್ಟೆಲ್ ನ ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ. 

ಈ ಪುಂಡರು ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸುವವರೆಗೂ ಯಾವುದೇ ಪೊಲೀಸರಾಗಲೀ ಅಥವಾ ಭದ್ರತಾ ಸಿಬ್ಬಂದಿ ಕೂಡಾ ಹಾಸ್ಟೆಲ್  ಒಳಗಡೆ ಬರಲೇ ಇಲ್ಲ ಎಂದು ಅವರು ದಿ  ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.

ಈ ಮಧ್ಯೆ ಕಳೆದ ರಾತ್ರಿ ನಡೆದ ಘಟನೆ ತನಿಖೆಗೆ ಸಂಬಂಧಿಸಿದಂತೆ ಜೆಎನ್ ಯು ಕ್ಯಾಂಪಸ್ ನಲ್ಲಿದ್ದ ಸಿಸಿಟಿವಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಈ ಹಿಂಸಾಚಾರದ ಕುರಿತು ಚರ್ಚಿಸುವ ಸಲುವಾಗಿ ವಿಶ್ವವಿದ್ಯಾಲಯದ ರಿಜಿಸ್ಟ್ರರ್, ಪ್ರೊಕ್ಟರ್, ರೆಕ್ಟರ್ ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಇಂದು ಕರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com