ಥಿಂಕ್ ಇಂಡಿಯಾ, ಥಿಂಕ್ ಎಡು: ಇಂಡಿಯನ್ ಎಕ್ಸ್ ಪ್ರೆಸ್ ನಿಂದ 8ನೇ ಬಾರಿ ದೇಶದ ಅತ್ಯುತ್ತಮ ಚಿಂತನಾಸಭೆ

2013ರಿಂದ ಪ್ರತಿ ವರ್ಷ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೇಶದ ಶಿಕ್ಷಣದ ಸ್ಥಿತಿ ಮತ್ತು ದೇಶದ ಯುವಕರು ಯಾವ ದಿಕ್ಕಿನತ್ತ ಸಾಗುತ್ತಿದ್ದಾರೆ ಎಂಬುದನ್ನು ಚರ್ಚಿಸಲು ದೇಶದ ಕೆಲವು ಅತ್ಯುತ್ತಮ ಮನಸ್ಸುಗಳನ್ನು ಹೊಂದಿದ ಮತ್ತು ಬದಲಾವಣೆ...
ಕಳೆದ ವರ್ಷದ ಆವೃತ್ತಿಯಲ್ಲಿ ಶಶಿ ತರೂರ್
ಕಳೆದ ವರ್ಷದ ಆವೃತ್ತಿಯಲ್ಲಿ ಶಶಿ ತರೂರ್

2013ರಿಂದ ಪ್ರತಿ ವರ್ಷ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೇಶದ ಶಿಕ್ಷಣದ ಸ್ಥಿತಿ ಮತ್ತು ದೇಶದ ಯುವಕರು ಯಾವ ದಿಕ್ಕಿನತ್ತ ಸಾಗುತ್ತಿದ್ದಾರೆ ಎಂಬುದನ್ನು ಚರ್ಚಿಸಲು ದೇಶದ ಕೆಲವು ಅತ್ಯುತ್ತಮ ಮನಸ್ಸುಗಳನ್ನು ಹೊಂದಿದ ಮತ್ತು ಬದಲಾವಣೆ ಮಾಡುವವರನ್ನು ಒಂದೇ ವೇದಿಕೆಯಲ್ಲಿ ಕರೆತಂದಿದೆ. ಇದೀಗ 8ನೇ ಬಾರಿ ದೇಶದ ಅತ್ಯುತ್ತಮ ಚಿಂತನಾಸಭೆ ಆಯೋಜಿಸಿದೆ.

ಈ ವರ್ಷದ 8 ನೇ ಆವೃತ್ತಿಯು ಜನವರಿ 8 ರಂದು ಚೆನ್ನೈನಲ್ಲಿ ಪ್ರಾರಂಭವಾಗಿ ಜನವರಿ 9 ರವರೆಗೆ ನಡೆಯುತ್ತದೆ, ‘ಇಂಡಿಯಾ ಅಟ್ 75: ವಿಷನ್ 2022’ ಎಂಬ ವಿಷಯದ ಕುರಿತು ಯೋಜನೆ ಮತ್ತು ಆಲೋಚನೆಗಳನ್ನು ಪ್ರಸ್ತುತಪಡಿಸುವ ಮೂಲಕ ಆ ಪರಂಪರೆಯನ್ನು ಮುಂದುವರೆಸುತ್ತಿದೆ.

ಕಳೆದ ವರ್ಷ ಚೆನ್ನೈನ ಐಟಿಸಿ ಗ್ರ್ಯಾಂಡ್ ಛೋಲಾದಲ್ಲಿ ನಡೆದ ಥಿಂಕ್ ಎಡು ಕಾಂಕ್ಲೇವ್ ಅನ್ನು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಉದ್ಘಾಟಿಸಿದ್ದರು. ಅಲ್ಲದೆ ಭವಿಷ್ಯದ ಭಾರತದ ಶಿಕ್ಷಣದ ಕುರಿತು ತಮ್ಮ ಅಲೋಚನೆಗಳನ್ನು ಹಂಚಿಕೊಂಡಿದ್ದರು. ನಂತರ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಯುವ ನಾಯಕ, ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ ಹಲವು ಗಣ್ಯರು ಚಿಂತನಾಸಭೆಯಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದ್ದರು.

ಈ ಬಾರಿ ಜನವರಿ 8ರಂದು ಬೆಳಗ್ಗೆ 10.30ಕ್ಕೆ ಡಾ. ಕೆ ಕಸ್ತೂರಿರಂಗನ್ ಅವರು ಥಿಂಕ್ ಎಡು ಕಾಂಕ್ಲೇವ್ ಗೆ ಚಾಲನೆ ನೀಡಲಿದ್ದು, ಬಳಿಕ 11.30ಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಅವರು ಹೊಸ ಶಿಕ್ಷಣ ನೀತಿ ಕುರಿತು ಮಾತನಾಡಲಿದ್ದಾರೆ.

ವಿಜ್ಞಾನದಲ್ಲಿ ಭಾರತದ ಇತಿಹಾಸಕ್ಕೆ ಸ್ಥಾನವಿದೆಯೇ ಎಂಬ ಚರ್ಚೆಯಲ್ಲಿ ಅರ್ಥಶಾಸ್ತ್ರಜ್ಞ ಮತ್ತು ಲೇಖಕ ಬಿಬೆಕ್ ಡೆಬ್ರಾಯ್, ವಿಜ್ಞಾನ್ ಅರ್ನಾಬ್ ಭಟ್ಟಾಚಾರ್ಯ ಮತ್ತು ಹಿಯಾಲ್ ಸಿಇಒ ಗೀತಾಂಜಲಿ ಜೆಬಿ ಅವರು ಭಾಗವಹಿಸಲಿದ್ದಾರೆ.

ಇನ್ನು ಜನವರಿ 9 ರಂದು ನಡೆಯುವ ಮೆಗಾ ಅಧಿವೇಶನ ನಿಮ್ಮ ಗಮನ ಸೆಳೆಯುವುದು ಖಚಿತ - ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸಂವಹನ ವಿಭಾಗದ ಮುಖ್ಯಸ್ಥ ಅನಿರುದ್ಧಾ ದೇಶಪಾಂಡೆ, ತೇಜಸ್ವಿ ಸೂರ್ಯ, ತಮಿಜಾಚಿ ತಂಗಪಾಂಡಿಯನ್, ಖುಷ್ಬು ಸುಂದರ್ ಮತ್ತು ಎನ್‌ಸಿಪಿ ಸಂಸದ ಸುಪ್ರಿಯಾ ಸೂಳೆ ಅವರು 'ರಿಪಬ್ಲಿಕ್ ಆಫ್ ಇಂಡಿಯಾ 2.0: ಬದಲಾವಣೆ ಮೂಲಭೂತವಾಗಿದೆಯೇ? ' ಎಂಬ ವಿಷಯದ ಕುರಿತ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. 

ಎರಡು ದಿನಗಳ ಸಮಾವೇಶವು ಮೆಗಾ ಸೆಷನ್‌ನೊಂದಿಗೆ ಮುಕ್ತಾಯಗೊಳ್ಳಲಿದ್ದು, ಸ್ಮೃತಿ ಇರಾನಿ ಅವರು ‘ದಿ ನ್ಯೂ ವುಮನ್: ಪವರ್ ವಿತ್ ರೆಸ್ಪಾನ್ಸಿಬಿಲಿಟಿ’(ಜನವರಿ 9ರಂದು ಸಂಜೆ 6) ಕುರಿತು ಮಾತನಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com