ಜೆಎನ್ ಯುಗೆ ದೀಪಿಕಾ ಭೇಟಿ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ಹೀಗಿದೆ... 

ಹಿಂಸಾಚಾರ ಘಟನೆ ಬೆನ್ನಲ್ಲೇ ಜೆಎನ್ ಯು ಗೆ ಭೇಟಿ ನೀಡಿದ್ದಕ್ಕಾಗಿ ದೀಪಿಕಾ ಪಡುಕೋಣೆ ಅವರ ಮುಂದಿನ ಚಿತ್ರ ಛಪಾಕ್ ಸಿನಿಮಾವನ್ನು ಬಹಿಷ್ಕರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ.
ಜೆಎನ್ ಯುಗೆ ದೀಪಿಕಾ ಭೇಟಿ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ಹೀಗಿದೆ...
ಜೆಎನ್ ಯುಗೆ ದೀಪಿಕಾ ಭೇಟಿ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ಹೀಗಿದೆ...

ಹಿಂಸಾಚಾರ ಘಟನೆ ಬೆನ್ನಲ್ಲೇ ಜೆಎನ್ ಯು ಗೆ ಭೇಟಿ ನೀಡಿದ್ದಕ್ಕಾಗಿ ದೀಪಿಕಾ ಪಡುಕೋಣೆ ಅವರ ಮುಂದಿನ ಚಿತ್ರ ಛಪಾಕ್ ಸಿನಿಮಾವನ್ನು ಬಹಿಷ್ಕರಿಸಲು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ದೀಪಿಕಾ ಪಡುಕೋಣೆ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಕೇವಲ ಕಲಾವಿದರಷ್ಟೇ ಅಲ್ಲ ಯಾವುದೇ ಸಾಮಾನ್ಯ ವ್ಯಕ್ತಿ ಎಲ್ಲಿ ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು, ಅದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಹೇಳಿದ್ದಾರೆ. 

ಜೆಎನ್ ಯು ನಲ್ಲಿ ಜ.೦6 ರಂದು ಸಂಜೆ ನಡೆದ ಹಿಂಸಾಚಾರ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಜ.07 ರಂದು ಸಂಜೆ ಜೆಎನ್ ಯು ಗೆ ತೆರಳಿದ್ದರು. ದೀಪಿಕಾ  ಪಡುಕೋಣೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡೆದಿತ್ತು. ಇದಕ್ಕೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಪ್ರತಿಕ್ರಿಯೆ ನೀಡಿದ್ದು, ಕೇವಲ ಕಲಾವಿದರಷ್ಟೇ ಅಲ್ಲ, ಸಾಮಾನ್ಯ ವ್ಯಕ್ತಿ ಸಹ ತನಗೆ ಎಲ್ಲಿ ಬೇಕೋ ಅಲ್ಲಿ ತೆರಳಬಹುದು, ಅಭಿಪ್ರಾಯ ವ್ಯಕ್ತಪಡಿಸಬಹುದು, ಇದಕ್ಕೆ ಯಾವ ನಿರ್ಬಂಧವೂ ಇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com