ಜನ ಇನ್ನೂ ಹಸಿವಿನಿಂದ ಸಾಯುತ್ತಿರುವಾಗ 5 ಟ್ರಿಲಿಯನ್ ಆರ್ಥಿಕತೆ ಹೊಂದಲು ಸಾಧ್ಯವಿಲ್ಲ: ಸಚಿನ್ ಪೈಲಟ್

ದೇಶದಲ್ಲಿ ಜನ ಇನ್ನೂ ಹಸಿವಿನಿಂದ ಸಾಯುತ್ತಿರಬೇಕಾದರೆ ನಾವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲು ಹೇಗೆ ಸಾಧ್ಯ ಎಂದು ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಪ್ರಶ್ನಿಸಿದ್ದಾರೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಚೆನ್ನೈ: ದೇಶದಲ್ಲಿ ಜನ ಇನ್ನೂ ಹಸಿವಿನಿಂದ ಸಾಯುತ್ತಿರಬೇಕಾದರೆ ನಾವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಲು ಹೇಗೆ ಸಾಧ್ಯ ಎಂದು ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಪ್ರಶ್ನಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಥಿಂಕ್ ಎಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿನ್ ಪೈಲಟ್ ಅವರು, ರಾಜ್ಯ ಮತ್ತು ಕೇಂದ್ರದ ನಡುವಿನ ಸಂಬಂಧ, ಇಂದು ರಾಜಕೀಯ ನಾಯಕರು ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು.

ನಾವು ನಮ್ಮ ಮುಂದಿನ ಪೀಳಿಗೆ ಬಗ್ಗೆ ಮತ್ತು ಅವರ ಭವಿಷ್ಯದ ಬಗ್ಗೆ ನಿರ್ಧರಿಸುವುದಾದರೆ ಮೊದಲು ಶಿಶು ಮರಣವನ್ನು ತಡೆಯಬೇಕು. ರಾಜಕೀಯ ನಾಯಕರು, ನಮಗೆ ಸಂಪನ್ಮೂಲಗಳ ಕೊರತೆ ಇದೆ, ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಹೇಳುವ ಬದಲು, ಅವುಗಳ ಜಾರಿಗೆ ಪ್ರಾಮಾಣಿಕವಾಗಿ ಯತ್ನಿಸಬೇಕು ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ದೇಶದಲ್ಲಿ ಬಡತನ ಮತ್ತು ಹಸಿವಿನಿಂದ ಸಾವು ಮುಂದುವರೆದರೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ಹೇಗೆ ಸಾಧ್ಯ? ದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ. 40 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ನಮ್ಮ ಜನಸಂಖ್ಯೆಯ ಪ್ರಮುಖ ಭಾಗವಾಗಿದೆ. ಅವರು ಸಹ ದೇಶದ ಅಭಿವೃದ್ಧಿಯ ಭಾಗವಾಗಬೇಕು. ನಾನು ಸಮಾಜವಾದಿಯಾಗಲು ಪ್ರಯತ್ನಿಸುತ್ತಿಲ್ಲ. ಆದರೆ ದೇಶದಲ್ಲಿ ಜನ ಹಸಿವಿನಿಂದ ಸಾಯುತ್ತಿರುವಾಗ ನಾವು ಹೇಗೆ ಮುಂದುವರೆಯಲು ಸಾಧ್ಯ? ಎಂದು ಪ್ರಶ್ನಿಸಿದರು.

ದೇಶದಲ್ಲಿ ಬಡವ ಮತ್ತು ಅತ್ಯಂತ ಬಡವನಿಗೆ ಹಣ ಒದಗಿಸುವ ಯೋಜನೆಗಳನ್ನು ನಾವು ಜಾರಿಗೆ ತರಬೇಕಾಗಿದೆ. ಅವರೂ ಶಿಕ್ಷಣ, ಆರೋಗ್ಯ ಮತ್ತು ಇತರೆ ಮೂಲ ಸೌಲಭ್ಯಗಳನ್ನು ಪಡೆಯುವಂತಾಗಬೇಕು. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಬಗ್ಗೆ ಮಾತನಾಡುವ ಅವರು ಹಸಿವಿನಿಂದ ಸಾಯುತ್ತಿರುವ ಮಕ್ಕಳನ್ನು ಮೊದಲು ಗಮನಿಸಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com