'ಜೆಎನ್‌ಯು ದಾಳಿ ಪ್ರಾಯೋಜಿತ ಗೂಂಡಾಗಿರಿ: ಎಚ್ ಆರ್ ಡಿ, ಗೃಹ ಇಲಾಖೆ ನೇರ ಹೊಣೆ'

ಜೆಎನ್‌ಯು ನಡೆದ ದಾಳಿ ಪ್ರಾಯೋಜಿತ ಗೂಂಡಾಗಿರಿ. ಗೃಹ ಸಚಿವ ಅಮಿತ್‌ ಶಾ, ಎಚ್‌ಆರ್‌ಡಿ ಸಚಿವ ರಮೇಶ್‌ ಪೋಖ್ರಿಯಾಲ್‌ ಅವರು ದಾಳಿಯ ಹೊಣೆ ಹೊರಬೇಕು. ದಾಳಿಯಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಜೆಎನ್ ಯು ಹಿಂಸಾಚಾರ ಖಂಡಿಸಿ ಪ್ರತಿಭಟನೆ
ಜೆಎನ್ ಯು ಹಿಂಸಾಚಾರ ಖಂಡಿಸಿ ಪ್ರತಿಭಟನೆ

ನವದೆಹಲಿ: ಜೆಎನ್‌ಯು ನಡೆದ ದಾಳಿ ಪ್ರಾಯೋಜಿತ ಗೂಂಡಾಗಿರಿ. ಗೃಹ ಸಚಿವ ಅಮಿತ್‌ ಶಾ, ಎಚ್‌ಆರ್‌ಡಿ ಸಚಿವ ರಮೇಶ್‌ ಪೋಖ್ರಿಯಾಲ್‌ ಅವರು ದಾಳಿಯ ಹೊಣೆ ಹೊರಬೇಕು. ದಾಳಿಯಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಜೆಎನ್ ಯು ನಲ್ಲಿ ನಡೆದ ಹಿಂಸಾಚಾರ ಘಟನೆ  ಇದ್ದಕ್ಕಿದ್ದಂತೆ ನಡೆದದ್ದಲ್ಲ, ಅದೊಂದು ವ್ಯವಸ್ಥಿತ ಪಿತೂರಿ, ಗಲಭೆಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ಕೇಂದ್ರ ಗೃಹ ಇಲಾಖೆಯೇ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. 

ಜೆಎನ್ ಯು ಉಪ ಕುಲಪತಿಗಳಾಗಿ ಎಂ.ಜಗದೀಶ್ ಕುಮಾರ್ ರಾಜಿನಾಮೆ  ನೀಡುವವರಗೂ ಎಲ್ಲವೂ ಸರಿಯಾಗಿತ್ತು ಎಂದು ಹೇಳಿದ್ದಾರೆ.  ಈಗ ಆಗಿರುವ ಎಲ್ಲಾ ಘಟನೆಗಳಿಗೆ ನೈತಿಕ ಹೊಣೆ ಹೊತ್ತು ಸದ್ಯ ಅಧಿಕಾರದಲ್ಲಿರುವ  ಉಪ ಕುಲಪತಿ ರಾಜಿನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com