
ನ್ಯೂಯಾರ್ಕ್: ಆತ ಟ್ವೀಟರ್ ನಲ್ಲಿ 1,000 ಅದೃಷ್ಟವಂತರನ್ನು ಘೋಷಿಸುವುದನ್ನು 40 ಲಕ್ಷ ಜನರು ಕಾತುರದಿಂದ ಕಾಯುತ್ತಾ ಆ ಪೋಸ್ಟ್ ಒಂದಕ್ಕೆ ರಿಟ್ವೀಟ್ ಮಾಡಿದ್ದಾರೆ.
ವಿಷಯ ಏನು ಅಂದರೆ ಜಪಾನ್ ನ ಬಿಲಿಯನೇರ್ ಆಗಿರುವ ಯುಸಾಕು ಮೇಜಾವಾ ಬರೊಬ್ಬರಿ 9 ಮಿಲಿಯನ್ ಡಾಲರ್ ನ್ನು ಜನರಿಗೆ ಹಂಚುವುದಾಗಿ ಘೋಷಿಸಿದ್ದರು. ಶಾಪಿಂಗ್ ದೊರೆ ಎಂದೇ ಕರೆಸಿಕೊಳ್ಳುವ ಯುಸಾಕು ಮೆಜಾವಾ ನ್ಯೂ ಇಯರ್ ನ ಹಿಂದಿನ ದಿನ ಟ್ವೀಟ್ ಮಾಡಿ 1 ಬಿಲಿಯನ್ ಯೆನ್ (9 ಮಿಲಿಯನ್ ಡಾಲರ್) ನ್ನು ಟ್ವಿಟರ್ ಬಳಕೆದಾರರಿಗೆ ನೀಡುವುದಾಗಿ ಘೋಷಿಸಿದ್ದರು.
ಹಣ ಜನರ ಜೀವನದಲ್ಲಿ ಸಂತೋಷ ತರುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಹಣ ನೀಡುತ್ತಿರುವುದಾಗಿ ಯುಸಾಕು ಮೆಜಾವಾ ಹೇಳಿದ್ದರು. ಅಂದಹಾಗೆ ಇದಕ್ಕಾಗಿ ಷರತ್ತನ್ನೂ ವಿಧಿಸಿದ್ದ ಯುಸಾಕು, ತಮ್ಮ ಟ್ವೀಟ್ ನ್ನು ಜ.7 ರ ಮಧ್ಯರಾತ್ರಿಗೂ ಮುನ್ನ ರಿಟ್ವೀಟ್ ಮಾಡುವ 1,000 ಅದೃಷ್ಟವಂತರಿಗೆ ಮಾತ್ರ ಒಂದು ಮಿಲಿಯನ್ ಯೆನ್ (ಹತ್ತಿರ ಹತ್ತಿರ 9,100ಡಾಲರ್) ಹಣ ದೊರೆಯುವುದಾಗಿ ಹೇಳಿದ್ದರು.
ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ, ಅದೃಷ್ಟಶಾಲಿಗಳಿಗೆ ಯುಸಾಕು ಮೆಜಾವಾ ಸ್ವತಃ ಮೆಸೇಜ್ ಮಾಡಿ ಎರಡು ಅಥವಾ ಮೂರು ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ.
ಒಂದು ಮಿಲಿಯನ್ ಹಣ ಓರ್ವ ಮನುಷ್ಯನ ಜೀವನದ ಮೇಲೆ ಏನು ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸೀರಿಯಸ್ ಸೋಶಿಯಲ್ ಟ್ರೈಯಲ್ ಎಂಬ ಸ್ಪರ್ಧೆಯನ್ನು ಆಯೋಜಿಸಿದ್ದರು.
Advertisement