ಜೆಎನ್ ಯು ದಾಳಿ, ಕಾಂಗ್ರೆಸ್ ಸಮಿತಿ ಸದಸ್ಯರು
ದೇಶ
ಜೆಎನ್ ಯು ದಾಳಿ: ಉಪ ಕುಲಪತಿಯೇ ಮಾಸ್ಟರ್ ಮೈಂಡ್- ಕಾಂಗ್ರೆಸ್ ಸಮಿತಿ ವರದಿ
ದೆಹಲಿಯ ಜವಹರ್ ಲಾಲ್ ನೆಹರು ವಿವಿಯ ಆವರಣದಲ್ಲಿ ನಡೆದ ಹಿಂಸಾಚಾರದ ಹಿಂದೆ ಅದರ ಉಪಕುಲಪತಿಯ ಕೈವಾಡವಿದೆ ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅನುಮಾನ ವ್ಯಕ್ತಪಡಿಸಿದೆ
ನವದೆಹಲಿ: ದೆಹಲಿಯ ಜವಹರ್ ಲಾಲ್ ನೆಹರು ವಿವಿಯ ಆವರಣದಲ್ಲಿ ನಡೆದ ಹಿಂಸಾಚಾರದ ಹಿಂದೆ ಅದರ ಉಪಕುಲಪತಿಯ ಕೈವಾಡವಿದೆ ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅನುಮಾನ ವ್ಯಕ್ತಪಡಿಸಿದೆ
ಜ. 5ರಂದು ವಿವಿ ಆವರಣದಲ್ಲಿ ಮುಸುಕುಧಾರಿಗಳು ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿ ಕುರಿತು ತನಿಖೆ ಕೈಗೊಂಡ ಸಮಿತಿ, ಘಟನೆಯಲ್ಲಿ ದಾಳಿ ನಡೆಸಿರುವವರೊಂದಿಗೆ ಉಪಕುಲಪತಿ ಕೈಜೋಡಿಸಿರುವುದು ಕಂಡುಬರುತ್ತಿದೆ. ಅವರೇ ಈ ಘಟನೆಯ ಮಾಸ್ಟರ್ ಮೈಂಡ್ ಎಂದು ಸಮಿತಿಯ ವರದಿ ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಘಟನೆ ಕುರಿತು ತನಿಖೆ ನಡೆಸಲು ಮಹಿಳಾ ಕಾಂಗ್ರಸ್ ಮುಖ್ಯಸ್ಥೆ ಸುಷ್ಮಿತಾ ದೇವ್, ಸಂಸದ ಮತ್ತು ಎನ್ ಎಸ್ ಯುಐ ಮಾಜಿ ಅಧ್ಯಕ್ಷೆ ಹಿಬಿ ಏಡನ್, ಸಂಸದ ಸೈಯದ್ ನಾಸೀರ್ ಹುಸೇನ್ ಮತ್ತು ಮಾಜಿ ಎನ್ ಎಸ್ ಯುಐ ಅಧ್ಯಕ್ಷೆ ಅಮೃತಾ ಧವನ್ ಅವರನ್ನೊಳಗೊಂಡ ಸಮಿತಿ ರಚಿಸಿದ್ದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ