ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಮಕೃಷ್ಣ ಮಿಷನ್?!
ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಗ್ಗೆ ರಾಮಕೃಷ್ಣ ಮಿಷನ್ ಬೇಸರ ವ್ಯಕ್ತಪಡಿಸಿದೆ ಎಂಬ ವರದಿ ಪ್ರಕಟವಾಗಿದೆ.
ಬೇಲೂರು ಮಠ-ರಾಮಕೃಷ್ಣ ಮಿಷನ್ ನ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಜನತೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಸಿಎಎ ಕುರಿತೂ ಪ್ರಸ್ತಾಪಿಸಿದ್ದರು.
ರಾಮಕೃಷ್ಣ ಮಿಷನ್ ರಾಜಕೀಯೇತರ ವೇದಿಕೆಯಾಗಿದ್ದು, ಈ ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಇನ್ಸ್ಟಿಟ್ಯೂಟ್ ನ ಸದಸ್ಯರಾಗಿರುವ ಗೌತಮ್ ರಾಯ್ ಬೇಸರ ವ್ಯಕ್ತಪಡಿಸಿರುವುದನ್ನು ದಿ ಹಿಂದೂ ವರದಿ ಮಾಡಿದೆ.
ರಾಜಕೀಯೇತರ ವೇದಿಕೆಯಿಂದ ವಿವಾದಾತ್ಮಕ ರಾಜಕೀಯ ಸಂದೇಶಗಳನ್ನು ರವಾನೆ ಮಾಡುವುದು ತುಂಬಾ ನೋವುಂಟುಮಾಡಿದೆ ಎಂದು ಗೌತಮ್ ರಾಯ್ ಹೇಳಿದ್ದಾರೆ.
ರಾಮಕೃಷ್ಣ ಮಿಷನ್ ದೀಕ್ಷೆ ನೀಡುವ ಅಧಿಕೃತ ಸಂಸ್ಥೆ, ಮೋದಿಗೆ ಅಧಿಕೃತವಾಗಿ ದೀಕ್ಷೆ ನೀಡಲಾಗಿಲ್ಲ. ಎರಡನೆಯದ್ದಾಗಿ ಮೋದಿ ಅವರಿಗೆ ಇಲ್ಲಿಗೆ ಬಂದು ರಾಜಕೀಯ ಹೇಳಿಕೆ ನೀಡುವುದಕ್ಕೆ ಅನುಮತಿ ಇಲ್ಲ. ಕಳೆದ ಕೆಲವು ವರ್ಷಗಳಲ್ಲಿ ಆರ್ ಎಸ್ ಎಸ್ ನಲ್ಲಿ ಹಿಂದೆ ಇದ್ದಂತಹ ಹಿರಿಯ ಆಧ್ಯಾತ್ಮಿಕ ನಾಯಕರ ಸೇರ್ಪಡೆ ಹಾಗೂ ಬಡ್ತಿಯ ಮೂಲಕ ರಾಮಕೃಷ್ಣ ಮಿಷನ್ ನ್ನು ರಾಜಕೀಯಗೊಳಿಸಲಾಗಿದೆ ಎಂದು ಗೌತಮ್ ರಾಯ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ