ದೆಹಲಿ ಚುನಾವಣೆ: ಮಾಜಿ ಕಾಂಗ್ರೆಸ್ ಶಾಸಕ ರಾಮ್ ಸಿಂಗ್, ಇತರೆ ಮೂವರು ಆಪ್ ಸೇರ್ಪಡೆ

ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭಗೊಂಡಿದ್ದು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ರಾಮ್ ಸಿಂಗ್ ನೇತಾಜಿ....
ರಾಮ್ ಸಿಂಗ್ ನೇತಾಜಿ - ಅರವಿಂದ್ ಕೇಜ್ರಿವಾಲ್
ರಾಮ್ ಸಿಂಗ್ ನೇತಾಜಿ - ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭಗೊಂಡಿದ್ದು, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ರಾಮ್ ಸಿಂಗ್ ನೇತಾಜಿ ಮತ್ತು ಇತರೆ ಮೂವರು ನಾಯಕರು ಸೋಮವಾರ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.

ರಾಮ್ ಸಿಂಗ್, ಹಿರಿಯ ಕಾಂಗ್ರೆಸ್ ನಾಯಕ ಮಹಾಬಲ ಮಿಶ್ರಾ ಅವರ ಪುತ್ರ ವಿನಯ್ ಕುಮಾರ್ ಹಾಗೂ ಕೌನ್ಸಿಲರ್ ಮತ್ತು ಸಾಮಾಜಿಕ ಕಾರ್ಯಕರ್ತ ಭಗ್ವಾನ್ ಉಪಕಾರ್ ಅವರು ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಪ್ ಸೇರ್ಪಡೆಯಾದರು.

ಎಎಪಿ ಸರ್ಕಾರದ ಉತ್ತಮ ಕಾರ್ಯಗಳಿಂದ ಪ್ರೇರೇಪಿತನಾಗಿ ನಾನು ಆಮ್ ಆದ್ಮಿ ಪಕ್ಷ ಸೇರಿದ್ದೇನೆ ಎಂದು ರಾಮ್ ಸಿಂಗ್ ನೇತಾಜಿ ಅವರು ಹೇಳಿದ್ದಾರೆ.

ಇನ್ನು ಈ ವೇಳೆ ಮಾತನಾಡಿದ ಕೇಜ್ರಿವಾಲ್ ಅವರು, ಪಕ್ಷದ ನೀತಿ ಹಾಗೂ ಎಎಪಿ ನೇತೃತ್ವದ ದೆಹಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಅವರು ನಮ್ಮ ಪಕ್ಷ ಸೇರಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com