ಸಿಎಎ ಅಡಿ ಪೌರತ್ವಕ್ಕಾಗಿ 50 ಸಾವಿರ ಹಿಂದೂ ನಿರಾಶ್ರಿತರನ್ನು ಗುರುತಿಸಿದ ಉತ್ತರ ಪ್ರದೇಶ

ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಜಾರಿಯಾಗಿದ್ದು, ನೂತನ ಕಾಯ್ದೆ ಅಡಿ ಪೌರತ್ವ ನೀಡುವುದಕ್ಕಾಗಿ 50 ಸಾವಿರ ಹಿಂದೂ ನಿರಾಶ್ರಿತರನ್ನು ಯೋಗಿ ಆದಿತ್ಯನಾಥ್ ಸರ್ಕಾರ ಗುರುತಿಸಿದೆ.
ಪಾಕ್ ಹಿಂದೂ ನಿರಾಶ್ರಿತರ ಸಂಭ್ರಮ
ಪಾಕ್ ಹಿಂದೂ ನಿರಾಶ್ರಿತರ ಸಂಭ್ರಮ

ಲಖನೌ: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಜಾರಿಯಾಗಿದ್ದು, ನೂತನ ಕಾಯ್ದೆ ಅಡಿ ಪೌರತ್ವ ನೀಡುವುದಕ್ಕಾಗಿ 50 ಸಾವಿರ ಹಿಂದೂ ನಿರಾಶ್ರಿತರನ್ನು ಯೋಗಿ ಆದಿತ್ಯನಾಥ್ ಸರ್ಕಾರ ಗುರುತಿಸಿದೆ.

ಉತ್ತರ ಪ್ರದೇಶ ಸರ್ಕಾರ, ದಶಕಗಳ ಹಿಂದೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದು ರಾಜ್ಯದಲ್ಲಿ ನೆಲೆಸಿರುವ 50 ಸಾವಿರ ನಿರಾಶ್ರಿತರ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಕೇಂದ್ರ ಸರ್ಕಾರಕ್ಕೆ ಕುಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ವಲಸೆಬಂದ ಸುಮಾರು 50 ಸಾವಿರ ನಿರಾಶ್ರಿತರಿದ್ದು, ಈ ಪೈಕಿ 38 ಸಾವಿರಕ್ಕೂ ಹೆಚ್ಚು ಜನ ಲಖನೌನಿಂದ 260 ಕಿ.ಮೀ. ದೂರದಲ್ಲಿರುವ ಪಿಲಿಭಿಟ್ ಜಿಲ್ಲೆಯ ತರಾಯಿಯಲ್ಲಿ ವಾಸಿಸುತ್ತಿದ್ದಾರೆ. 

ಉತ್ತರ ಪ್ರದೇಶ ಸರ್ಕಾರ ಸಿಎಎ ಅಡಿ ಪೌರತ್ವಕ್ಕಾಗಿ ಮೊದಲ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದು, ಫಿಲಿಭಿಟ್, ಮೀರತ್, ಲಖಿಂಪುರ್ ಖೇರ್, ಬಹ್ರೈಚ್, ಆಗ್ರ, ರಾಯ್ ಬರೇಲಿ, ಸಹರನಾಪುರ್, ಗೋರಖ್ ಪುರ್, ಅಲಿಘಡ್, ರಾಂಪೂರ್, ಮುಜಾಫರ್ ನಗರ್, ಹಾಪೂರ್, ಮಥುರಾ, ಖಾನ್ ಪುರ್, ಪ್ರತಾಪ್ ಗಢ, ಅಮೇಥಿ ಹಾಗೂ ವಾರಣಾಸಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಪೌರತ್ವ ನೀಡುವಂತೆ ಯೋಗಿ ಸರ್ಕಾರ ಕೋರಿದೆ.

ಉತ್ತರ ಪ್ರದೇಶ ಸರ್ಕಾರ ಪಟ್ಟಿಯೊಂದಿಗೆ ಒಂದು ವರದಿಯನ್ನು ಸಹ ಕೇಂದ್ರಕ್ಕೆ ನೀಡಿದ್ದು, ಅದರಲ್ಲಿ ಈ ನಿರಾಶ್ರಿತ ಹಿಂದೂಗಳು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿನ ಪ್ರತಿಕೂಲ ಆಡಳಿತ ಹಾಗೂ ಸರ್ಕಾರಿ ಪ್ರಾಯೋಜಿತ ದೌರ್ಜನ್ಯಗಳಿಂದ ಬೇಸತ್ತು ಭಾರತಕ್ಕೆ ವಲಸೆ ಬಂದಿದ್ದಾರೆ ಎಂದು ವಿವರಿಸಲಾಗಿದೆ.

ಕಳೆದ ವಾರ, ಭಾರತೀಯ ಪೌರತ್ವಕ್ಕಾಗಿ ನಿಮ್ಮ ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ನಿರಾಶ್ರಿತರನ್ನು ಗುರುತಿಸಿ ವರದಿ ನೀಡುವಂತೆ ರಾಜ್ಯದ ಎಲ್ಲಾ 75 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರಾಜ್ಯ ಗೃಹ ಇಲಾಖೆ ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com