ದೆಹಲಿ ಪೊಲೀಸರನ್ನು 2 ದಿನ ನಮಗೆ ಕೊಡಿ: ನಿರ್ಭಯಾ ಹಂತಕರನ್ನು ನಾವು ಗಲ್ಲಿಗೇರಿಸುತ್ತೇವೆ; ಸಿಸೋಡಿಯಾ

ದೆಹಲಿ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯನ್ನು 2 ದಿನ ನಮಗೆ ಕೊಡಿ, ನಿರ್ಭಯಾ ಹಂತಕರನ್ನು ನಾವು ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಮನೀಷ್ ಸಿಸೋಡಿಯಾ
ಮನೀಷ್ ಸಿಸೋಡಿಯಾ
Updated on

ನವದೆಹಲಿ: ದೆಹಲಿ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯನ್ನು 2 ದಿನ ನಮಗೆ ಕೊಡಿ, ನಿರ್ಭಯಾ ಹಂತಕರನ್ನು ನಾವು ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ವಿಳಂಬವಾಗುತ್ತಿರುವುದಕ್ಕೆ ದೆಹಲಿ ಸರ್ಕಾರ ಕಾರಣ ಎಂಬ ಬಿಜೆಪಿ ಆರೋಪಕ್ಕೆ ಮನೀಷ್ ಸಿಸೋಡಿಯಾ ತಿರುಗೇಟು ನೀಡಿದ್ದಾರೆ.

ನಿರ್ಭಯ ಅತ್ಯಾಚಾರ ಅಪರಾಧಿಗಳಿಗೆ ಇದುವರಗೂ ಗಲ್ಲು ಶಿಕ್ಷೆ ಜಾರಿಯಾಗದ್ದಕ್ಕೆ ದೆಹಲಿಯ ಎಎಪಿ ಸರ್ಕಾರ ಕಾರಣ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದರು. 

2017 ರಲ್ಲಿ ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು.  ಆದರೆ ದೆಹಲಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಳಂಭವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಜಾವ್ಡಕರ್ ಅವರೇ, ಪೊಲೀಸರು, ನಿಮ್ಮ ಅಧೀನದಲ್ಲಿದ್ದಾರೆ. ಕಾನೂನು ಸುವ್ಯವಸ್ಥೆ ಕೂಡ ನಿಮ್ಮ ಕೈಯ್ಯಲ್ಲಿದೆ.  ಗೃಹ  ಇಲಾಖೆಯು ಕೂಡ ನಿಮ್ಮ ಕೈ ಕೆಳಗಿದೆ,  ಎಲ್ಲವೂ ನಿಮ್ಮ ಬಳಿಯಿದ್ದರೂ ವಿನಾ ಕಾರಣ ನಮ್ಮನ್ನು ಏಕೆ ದೂಷಿಸುತ್ತೀರಿ ಎಂದು ಸಿಸೋಡಿಯಾ ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com