ಪ್ರಧಾನಿ ನರೇಂದ್ರ ಮೋದಿ
ದೇಶ
ಪ್ರಧಾನಿ ಮೋದಿ ಪೌರತ್ವ ದಾಖಲೆ ಕೋರಿ ಆರ್‌ಟಿಐ ಅರ್ಜಿ!
ಪ್ರಧಾನಿ ನರೇಂದ್ರ ಮೋದಿ ಭಾರತೀಯ ಪ್ರಜೆ ಹೌದೆ? ಹಾ! ಹೀಗೇಕೆ ಕೇಳುತ್ತೀರಿ ಎಂದು ಅಚ್ಚರಿ ಪಡಬೇಡಿ ಮೋದಿ ಭಾರತೀಯ ಪ್ರಜೆ ಹೌದೆ, ಅಲ್ಲವೆ ತಿಳಿಯಲು ಸೂಕ್ತ ದಾಖಲೆ ಒದಗಿಸಬೇಕೆಂದು ಕೇಳುವ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯೊಂದು ಕೇರಳ ಮಾಹಿತಿ ಇಲಾಖೆಯ ಮುಂದೆ ಬಂದಿದೆ.
ತ್ರಿಶೂರ್: ಪ್ರಧಾನಿ ನರೇಂದ್ರ ಮೋದಿ ಭಾರತೀಯ ಪ್ರಜೆ ಹೌದೆ? ಹಾ! ಹೀಗೇಕೆ ಕೇಳುತ್ತೀರಿ ಎಂದು ಅಚ್ಚರಿ ಪಡಬೇಡಿ ಮೋದಿ ಭಾರತೀಯ ಪ್ರಜೆ ಹೌದೆ, ಅಲ್ಲವೆ ತಿಳಿಯಲು ಸೂಕ್ತ ದಾಖಲೆ ಒದಗಿಸಬೇಕೆಂದು ಕೇಳುವ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯೊಂದು ಕೇರಳ ಮಾಹಿತಿ ಇಲಾಖೆಯ ಮುಂದೆ ಬಂದಿದೆ.
ತ್ರಿಶೂರ್ ಜಿಲ್ಲೆಯ ಚಳಕ್ಕುಡಿ ಪಟ್ಟಣದ ಜೋಶ್ ಕಲ್ಲುವೀಟ್ಟಿಳ್ ಈ ನಿಟ್ಟಿನಲ್ಲಿ ಜನವರಿ 13 ರಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸಿ ಎಂದು ಅರ್ಜಿಯಲ್ಲಿ ಕೋರಲಾಗಿದೆ
ಅರ್ಜಿಯನ್ನು ಚಳಕ್ಕುಡಿ ಪುರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮುಂದೆ ಸಲ್ಲಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ