ಎನ್ ಆರ್ ಸಿಗೆ ಬದ್ಧವಾದರೆ ಬಂಗಾಳದಿಂದ 1 ಕೋಟಿ ಅಕ್ರಮ ಬಾಂಗ್ಲಾದೇಶಿಯರನ್ನು ವಾಪಾಸ್ ಕಳುಹಿಸಬಹುದು-ದಿಲೀಪ್ ಘೋಷ್ 

ಉದ್ದೇಶಿತ ದೇಶಾದ್ಯಂತ ಎನ್ ಆರ್ ಸಿ ವಿಸ್ತರಣೆಗೆ ಸರ್ಕಾರ ಬದ್ಧವಾದರೆ ಬಂಗಾಳದಲ್ಲಿನ  1 ಕೋಟಿ ಅಕ್ರಮ ಬಾಂಗ್ಲಾದೇಶಿಯರನ್ನು ವಾಪಾಸ್ ಕಳುಹಿಸಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್

ಬಸ್ರತ್:  ಉದ್ದೇಶಿತ ದೇಶಾದ್ಯಂತ ಎನ್ ಆರ್ ಸಿ ವಿಸ್ತರಣೆಗೆ ಸರ್ಕಾರ ಬದ್ಧವಾದರೆ ಬಂಗಾಳದಲ್ಲಿನ  1 ಕೋಟಿ ಅಕ್ರಮ ಬಾಂಗ್ಲಾದೇಶಿಯರನ್ನು ವಾಪಾಸ್ ಕಳುಹಿಸಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು ಅಖಂಡ ಭಾರತ ಹಾಗೂ ಬಂಗಾಳಕ್ಕೆ ವಿರುದ್ಧವಾಗಿದೆ ಎಂದರು.

ರಾಜ್ಯದಲ್ಲಿ 1 ಕೋಟಿ ಅಕ್ರಮ ಮುಸ್ಲಿಂರಿಗೆ ಸರ್ಕಾರ ಕೆಜಿಗೆ 2 ರೂ. ನಂತೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡಲಾಗುತ್ತಿದೆ. ಅಂತಹವರನ್ನು ಮರಳಿ ಅವರ ರಾಷ್ಟ್ರಕ್ಕೆ ವಾಪಾಸ್ ಕಳುಹಿಸಬಹುದು ಎಂದು ಹೇಳಿದರು.

ಬಾಂಗ್ಲಾದೇಶದ ಮುಸ್ಲಿಂರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಹಿಂದೂ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಏಕೆ ವಿರೋಧಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಸಿಎಎ ವಿರೋಧಿಗಳು, ಬಂಗಾಳ ಅಥವಾ ಭಾರತದ ವಿರೋಧಿಗಳು ಎಂದರು. 

ಸಿಎಎ ವಿರೋಧಿಸುವ ಗಣ್ಯ ವ್ಯಕ್ತಿಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ಒಳನುಸುಳುವವರಿಗೆ ಹೃದಯ ತುಂಬಿ ಬರುತ್ತದೆ ಆದರೆ, ಹಿಂದೂ ವಲಸಿಗರ ಗತಿ ಏನು? ಅದಕ್ಕೆ ಅವರ ಬಳಿ ಉತ್ತರವಿಲ್ಲ, ಇದು ಇಬ್ಬಗೆಯ ನೀತಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪಕ್ಷ 50 ಸ್ಥಾನಗಳಿಗೆ ಸಿಮೀತವಾಗಲಿದೆ ಎಂದು ಭವಿಷ್ಯ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com