ಸೈಫ್ ಅಲಿಖಾನ್, ಮೀನಾಕ್ಷಿ ಲೆಖಿ
ಸೈಫ್ ಅಲಿಖಾನ್, ಮೀನಾಕ್ಷಿ ಲೆಖಿ

ಸೈಫ್ ಅಲಿಖಾನ್ ವಿರುದ್ಧ ಮುಗಿಬಿದ್ದ ಮೀನಾಕ್ಷಿ ಲೆಖಿ, ಕಾರಣವೇನು ಗೊತ್ತಾ?

ಬಾಲಿವುಡ್ ನಟ ಸೈಫ್ ಆಲಿಖಾನ್  ಇತ್ತೀಚಿಗೆ ಭಾರತದ ಇತಿಹಾಸದ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ವಾಗ್ದಾಳಿ ನಡೆಸಿದ್ದಾರೆ.
Published on

ನವದೆಹಲಿ: ಬಾಲಿವುಡ್ ನಟ ಸೈಫ್ ಆಲಿಖಾನ್  ಇತ್ತೀಚಿಗೆ ಭಾರತದ ಇತಿಹಾಸದ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ವಾಗ್ದಾಳಿ ನಡೆಸಿದ್ದಾರೆ.

ಸೈಫ್ ಅಲಿಖಾನ್  ಇತ್ತೀಚಿಗೆ ತನ್ನ ಮೂರು ವರ್ಷದ ಮಗ ತೈಮೂರು ಹೆಸರು ಉಲ್ಲೇಖಿಸಿ ಭಾರತದ ಇತಿಹಾಸದ ಕುರಿತು ನೀಡಿರುವ ಹೇಳಿಕೆ ವಿರುದ್ಧ ಭಾರತೀಯ ಜನತಾ ಪಕ್ಷದ ವಕ್ತಾರೆ ಆಗಿರುವ ಮೀನಾಕ್ಷಿ ಲೆಖಿ ವಾಕ್ ಮುಗಿ ಬಿದಿದ್ದಾರೆ. 

ತಮ್ಮ ಇತ್ತೀಚಿನ ಚಿತ್ರ ತನ್ಹಾಜಿಯ ರಾಜಕೀಯ ಸನ್ನಿವೇಶದ ಕುರಿತು ಸಂದರ್ಶನವೊಂದರಲ್ಲಿ ಉತ್ತರಿಸಿದ ಸೈಫ್, "ಇದು ಇತಿಹಾಸ ಎಂದು ನಾನು ಭಾವಿಸುವುದಿಲ್ಲ. ಬ್ರಿಟಿಷರು ಅದನ್ನು ನೀಡುವವರೆಗೂ ಭಾರತದ ಪರಿಕಲ್ಪನೆ ಇತ್ತು ಎಂದು ನಾನು ಭಾವಿಸುವುದಿಲ್ಲ ಎಂದಿದ್ದರು. 

ಸೈಫ್ ಅಲಿಖಾನ್  ಮಗನ ಹೆಸರನ್ನು ಹೇಳಿರುವುದಕ್ಕೆ ಮೀನಾಕ್ಷಿ ಲೇಖಿ ಟ್ವೀಟರ್ ಮೂಲಕ ಆಕ್ರೋಶದ ಹೇಳಿಕೆ ಹೊರಹಾಕಿದ್ದಾರೆ. ಟರ್ಕಿಗಳು ಕೂಡಾ  ಸಹ ತೈಮೂರ್ ನ್ನು ರಾಕ್ಷಕರು ಎಂದುಕೊಳ್ಳುತ್ತಾರೆ.  ಆದರೆ ಕೆಲವರು ತಮ್ಮ ಮಕ್ಕಳಿಗೆ ತೈಮೂರ್ ಎಂದು ಹೆಸರಿಸಲು ಆಯ್ಕೆ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಸೈಫ್ ಅಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ದಂಪತಿಗೆ 2016 ರ ಡಿಸೆಂಬರ್‌ನಲ್ಲಿ ಜನಿಸಿದ ತೈಮೂರ್ ಅಲಿ ಖಾನ್ ಪಟೌಡಿ ಅವರ ಹೆಸರು ಬಲಪಂಥೀಯ ಸಾರ್ವಜನಿಕ ವ್ಯಕ್ತಿಗಳು ಮತ್ತು ಟ್ರೋಲ್‌ಗಳ ಕೋಪವನ್ನು ಗಳಿಸುತ್ತಿರುವುದು ಇದೇ ಮೊದಲಲ್ಲ.

ಸೈಫ್ ಅಲಿ ಖಾನ್ ಮತ್ತು ಪತ್ನಿ ಕರೀನಾ ಕಪೂರ್ ದಂಪತಿಗೆ ಡಿಸೆಂಬರ್ 2016ರಲ್ಲಿ ಜನಿಸಿದ ತೈಮೂರು ಅಲಿಖಾನ್ ಪಟೌಡಿ ಹೆಸರು ಈ ಹಿಂದೆ ಕೂಡಾ ಬಲಪಂಥೀಯ ವ್ಯಕ್ತಿಗಳಿಂದ ಟ್ರೋಲ್ ಗೆ ಒಳಗಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com